ಬೆಂಗಳೂರು: ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಗೋಪಶೆಟ್ಟಿ ಮಲ್ಲಿಕಾರ್ಜುನ ಕೋಟಿ ಕೋಟಿ ಗಳಿಸಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆ ಹಚ್ಚಿದೆ.

ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್. ಸತೀಶ್ ಕುಮಾರ್, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಎನ್. ರಾಮಕೃಷ್ಣ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಸಹಾಯಕ ಎಂಜಿನಿಯರ್ ರಾಘಪ್ಪ ಲಾಲಪ್ಪ ಲಮಾಣಿ ಅವರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಇರುವುದನ್ನು ಬಯಲಿಗೆಳೆದಿದ್ದಾರೆ.

ಗೋಪಶೆಟ್ಟಿ ಅವರು ರಾಯಚೂರು ಜಿಲ್ಲೆಯಲ್ಲಿ 1 ಪೆಟ್ರೋಲ್ ಬಂಕ್, 2 ಟ್ರ್ಯಾಕ್ಟರ್ ಷೋ ರೂಂಗಳು, 9 ಎಕರೆ ಜಮೀನು, ರಾಯಚೂರಿನಲ್ಲಿ 3 ಮನೆ, ಬೆಂಗಳೂರಿನಲ್ಲಿ 1 ಮನೆ, 2 ಫ್ಲ್ಯಾಟ್, ರಾಯಚೂರಿನಲ್ಲಿ 1, ಕೊಪ್ಪಳದಲ್ಲಿ 2 ನಿವೇಶನ, 1 ಕೆ.ಜಿ 394 ಗ್ರಾಂ ಚಿನ್ನ, 11 ಕೆ.ಜಿ ಬೆಳ್ಳಿ, 1 ಹುಂಡೈ ಕಾರು, 1 ಟೊಯೊಟಾ ಇನ್ನೋವಾ ಕಾರು, 1 ದ್ವಿಚಕ್ರ ವಾಹನ, ₹ 1.04 ಲಕ್ಷ ಮೌಲ್ಯದ ಪೀಠೋಪಕರಣ ಹೊಂದಿದ್ದಾರೆ.

ಮಲ್ಲಿಕಾರ್ಜುನ ಬಳಿ ಪತ್ತೆ ಆಗಿರುವ ಆಸ್ತಿಪಾಸ್ತಿ ಕಂಡು ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಇಷ್ಟೊಂದು ಪ್ರಮಾಣದ ಆಸ್ತಿಯನ್ನು ಹೇಗೆ ಸಂಪಾದಿಸಿದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಂಚ ಪಡೆದ ಆರೋಪ!
ಸತೀಶ್, ವಾಣಿಜ್ಯ ತೆರಿಗೆ ಇಲಾಖೆ ಕೋರಮಂಗಲ ವಿಭಾಗದ ಜಂಟಿ ಕಮಿಷನರ್ ಆಗಿದ್ದಾಗ ₹ 35 ಸಾವಿರ ಲಂಚ ಪಡೆದು ಎಸಿಬಿ ಬಲೆಗೆ ಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ. 2016ರಲ್ಲಿ ಈ ಪ್ರಕರಣ ನಡೆದಿತ್ತು. ಆನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ತೆರಿಗೆ ಹಣ ಮರುಪಾವತಿಸಲು ವರ್ತಕರೊಬ್ಬರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಯಾರ ಆಸ್ತಿ ಎಷ್ಟು?
ಎಲ್. ಸತೀಶ್ ಕುಮಾರ್: ಮೈಸೂರಿನ ಸರಸ್ವತಿಪುರದಲ್ಲಿ 1 ಮನೆ, ಬೆಂಗಳೂರಿನಲ್ಲಿ 2 ಫ್ಲ್ಯಾಟ್, 5 ನಿವೇಶನ, 1ಕೆ.ಜಿ 17 ಗ್ರಾಂ ಚಿನ್ನ, 7 ಕೆ.ಜಿ 290 ಗ್ರಾಂ ಬೆಳ್ಳಿ, 1 ಟೊಯೊಟಾ ಇನ್ನೋವಾ ಕಾರು, 1 ಹೋಂಡಾ ಅಮೇಜ್ ಕಾರು, 1 ದ್ವಿಚಕ್ರ ವಾಹನ,₹ 2.92 ಲಕ್ಷ ನಗದು.

ರಾಮಕೃಷ್ಣ: ಕೋಲಾರದಲ್ಲಿ 1 ಮನೆ, ಬೆಂಗಳೂರಿನಲ್ಲಿ 2 ಮನೆ, 3 ನಿವೇಶನ, ಬಂಗಾರಪೇಟೆ ಚಿನ್ನ ಕಾಮನಹಳ್ಳಿಯಲ್ಲಿ 1.23 ಎಕರೆ ಕೃಷಿ ಜಮೀನು, 877 ಗ್ರಾಂ ಚಿನ್ನ,1 ಕೆ.ಜಿ 586 ಗ್ರಾಂ ಬೆಳ್ಳಿ, 1 ಮಾರುತಿ ಸ್ವಿಫ್ಟ್ ಕಾರು, 3 ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್ಗಳಲ್ಲಿ ₹ 8.22 ಲಕ್ಷ ಠೇವಣಿ.

ರಾಘಪ್ಪ ಲಾಲಪ್ಪ ಲಮಾಣಿ: ಬಾಗಲಕೋಟೆಯಲ್ಲಿ2 ಮನೆ, ಚಿನ್ನ 334 ಗ್ರಾಂ, ಬೆಳ್ಳಿ 1ಕೆ.ಜಿ 277 ಗ್ರಾಂ,1 ಮಾರುತಿ ರಿಟ್ಜ್ ಕಾರು, 1 ದ್ವಿಚಕ್ರ ವಾಹನ,ವಿವಿಧ ಬ್ಯಾಂಕ್ಗಳಲ್ಲಿ 2.88 ಲಕ್ಷ ಠೇವಣಿ,ನಗದು ₹ 1.92 ಲಕ್ಷ ಮತ್ತು 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.