ಗುರುವಾರ , ಸೆಪ್ಟೆಂಬರ್ 19, 2019
29 °C

ನಟಿ ರಮ್ಯಾ ಘನತೆಗೆ ಧಕ್ಕೆ ತರುವ ಪೋಸ್ಟ್; ಎಫ್‌ಐಆರ್‌

Published:
Updated:

ಬೆಂಗಳೂರು: ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದ ಆರೋಪದಡಿ ನವೀನ್‌ ಸಾಗರ್ ಎಂಬಾತನ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಮ್ಯಾ ಪರವಾಗಿ ವಕೀಲೆ ಎಚ್‌.ವಿ. ಭವ್ಯ ಅನು ಎಂಬುವರು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ರಮ್ಯಾ ಅಭಿನಯಿಸಿದ್ದ ಸಿನಿಮಾವೊಂದರ ಫೋಟೊವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದಗಳನ್ನು ಬಳಸಿ ನವೀನ್‌ ಸಾಗರ್‌ ಪೋಸ್ಟ್‌ ಮಾಡಿದ್ದಾನೆ. ಆ ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತಂದು, ಅವರ ತೇಜೋವಧೆಗೆ ಯತ್ನಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಎಚ್‌.ವಿ. ಭವ್ಯ ದೂರಿನಲ್ಲಿ ಆಗ್ರಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

Post Comments (+)