ಬೆಂಗಳೂರು: ‘ವೈಜ್ಞಾನಿಕ ಆವಿಷ್ಕಾರಗಳು ಏನಿದ್ದರೂ ನಮ್ಮ ಪರಿಸರ, ಪ್ರಕೃತಿಗೆ ಪೂರಕವಾಗಿಯೇ ಇರಬೇಕು. ವಿರುದ್ಧವಾಗಿದ್ದರೆ ಅದು ನಿರೀಕ್ಷಿತ ಫಲ ನೀಡದು, ಬಹುಕಾಲ ಉಳಿಯದು’ ಎಂದು ರಸಾಯನ ವಿಜ್ಞಾನದಲ್ಲಿ ನೊಬೆಲ್ ಪುರಸ್ಕೃತೆಜರ್ಮನಿಯ ಸ್ಟೀಫನ್ ಡಬ್ಲ್ಯು.ಹೆಲ್ ಮತ್ತು ಇಸ್ರೇಲ್‌ನ ಪ್ರೊ.ಅದಾ ಯೊನಾಥ್ ಹೇಳಿದರು.

ಇಲ್ಲಿನಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪಾಲ್ಗೊಂಡಿರುವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.

‘ಸಂಶೋಧನೆಗೆ ಮುಂದುವರಿದ ದೇಶ, ಮುಂದುವರಿಯುತ್ತಿರುವ ದೇಶ ಎಂಬುದಿಲ್ಲ. ಆದರೆ ಕುತೂಹಲ ಬೇಕಷ್ಟೇ. ಇತರರನ್ನು ಅನುಕರಿಸದೆ ನಮ್ಮ ನೈಜತೆ ಅಥವಾ ಸ್ವಂತಿಕೆಯನ್ನು ಪಾಲಿಸಬೇಕಷ್ಟೇ. ಆಗ ಅದು ಸಣ್ಣ ಸಂಶೋಧನೆಯಾದರೂ ಬಹಳ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅದುವೇ ನೊಬೆಲ್ ಪ್ರಶಸ್ತಿಗೂ ದಾರಿ ಮಾಡಿಕೊಡಬಹುದು’ ಎಂದು ಇಬ್ಬರೂ ತಮ್ಮ ಅನುಭವದ ಆಧಾರದಲ್ಲಿ ಹೇಳಿದರು.‘ಯಹೂದಿಗಳು ಜಗತ್ತಿನಲ್ಲಿ ಬಹಳ ನೋವು ಉಂಡವರು. ಆದರೆ ಜ್ಞಾನವನ್ನು ಅವರು ಬಳಸಿಕೊಂಡಿದ್ದರಿಂದ ದೇಶದ ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಂಡವು’ ಎಂದು ಅದಾ ಯೊನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.