ಮಂಗಳವಾರ, ಜೂನ್ 2, 2020
27 °C

ಎಂಎಸ್‌ಐಎಲ್‌ ಮಳಿಗೆಯಿಂದ ₹1 ಲಕ್ಷ ಮೌಲ್ಯದ ಮದ್ಯ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ಇಲ್ಲಿನ ಕುತ್ತಾರು ನಿತ್ಯಾನಂದನಗರದ ಎಂಎಸ್‌ಐಎಲ್‌ನ ಮದ್ಯದ ಮಳಿಗೆಗೆ ನುಗ್ಗಿದ ಕಳ್ಳರು, ₹1 ಲಕ್ಷ ಮೌಲ್ಯದ ಮದ್ಯವನ್ನು ಕಳವು ಮಾಡಿದ್ದಾರೆ.

ಷಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಬಾಗಿಲನ್ನು ಮುರಿದಿದ್ದಾರೆ. ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್ ಅನ್ನೂ ಕಳವು ಮಾಡಲಾಗಿದೆ.

ಅಂಗಡಿಯ ಷಟರ್ ತೆರೆಯುವುದನ್ನು ಕಂಡ ಜನರು, ಮಳಿಗೆ ತೆರೆದಿರುವುದಾಗಿ ಭಾವಿಸಿ, ಮದ್ಯ ನೀಡುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಕಂಡುಬಂತು. ದ್ವಿಚಕ್ರ ವಾಹನಗಳಲ್ಲಿ ಕೆಲವರು ಬಂದರೆ, ಇನ್ನು ಕೆಲವರು ಕಾರಿನಲ್ಲಿ ಬಂದು ಮದ್ಯ ಕೇಳಿ ಪೊಲೀಸರಿಂದ ತರಾಟೆಗೆ ಒಳಗಾದರು. ಈ ಮಳಿಗೆಯ ಸಮೀಪದಲ್ಲಿರುವ ಪಾನ್ ಅಂಗಡಿಯಿಂದಲೂ 10 ಪ್ಯಾಕೆಟ್ ಸಿಗರೇಟ್‌ ಕಳವು ಮಾಡಲಾಗಿದೆ. ಮೂರು ವರ್ಷದಲ್ಲಿ 10 ನೇ ಬಾರಿ ಕಳವು ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು