ಶುಕ್ರವಾರ, ನವೆಂಬರ್ 22, 2019
19 °C
'ಅನರ್ಹ ಶಾಸಕರಿಗೆ ಅಮಿತ್ ಶಾ ಅವರ ಬೆಂಬಲವಿದೆ'

ಸೋತ ನಮ್ಮ ಅಭ್ಯರ್ಥಿಗಳಿಂದ ಸರ್ಕಾರ ಬರ್ತಿತ್ತಾ; ಯಡಿಯೂರಪ್ಪ ವಿಡಿಯೋ ವೈರಲ್

Published:
Updated:

ಬೆಂಗಳೂರು: ಅನರ್ಹರು ಕೈಜೋಡಿಸದಿದ್ದರೆ ನಾವು ಇನ್ನೂ ಮೂರುವರೆ ವರ್ಷ ವಿರೋಧ ಪಕ್ಷದಲ್ಲಿ ಕುಳಿತಿರಬೇಕಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಿದ್ದಾರೆನ್ನಲಾದ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಈ ಮಾತುಗಳನ್ನಾಡಿದ್ದು, ಅನರ್ಹ ಶಾಸಕರ ಬೆಂಬಲಕ್ಕೆ ಅಮಿತ್ ಶಾ ಇದ್ದಾರೆ. ಇದೇ 4–5 ರಂದು ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ಶೇ 90ರಷ್ಟು ಬರಲಿದೆ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಮಾತನಾಡುತ್ತಾ, ಹಿಂದಿನ ಚುನಾವಣೆಯಲ್ಲಿ ಯಲ್ಲಾಪುರದಲ್ಲಿ ಸೋತ ಪಾಟೀಲ‌ ಹಾಗೂ ಕಾಗವಾಡದಲ್ಲಿ ಸೋತ ರಾಜುಕಾಗೆಯಿಂದ ಸರ್ಕಾರ ಬರುತ್ತಿತ್ತಾ? ರಾಜೀನಾಮೆ ಕೊಟ್ಟು, ಅನರ್ಹರಾಗಿರುವವರು ತಮ್ಮ ರಾಜೀನಾಮೆ ಸ್ವೀಕರಿಸಿ ಎಂದು ಸುಪ್ರೀಂಕೋರ್ಟ್‌‌ಗೆ ಹೋಗಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲಬೇಕಾದ ನಾವು ಅವರನ್ನು ಟೀಕೆ ಮಾಡುತ್ತಿರುವುದು ಸಲ್ಲದು.

ಕೇಂದ್ರ ಸಚಿವರು, ನಮ್ಮ ಕೆಲವು ನಾಯಕರ ಭಾವನೆ ಏನಿದೆಯೋ ಗೊತ್ತಿಲ್ಲ. ರಾಜು ಕಾಗೆ ಮನವೊಲಿಸಿ ಅನರ್ಹರನ್ನು ಗೆಲ್ಲಿಸಲು ಶ್ರಮವಹಿಸುತ್ತೇವೆ ಎಂದು ಹೇಳಬೇಕಾದವರು ಟೀಕೆ ಮಾಡುತ್ತಿದ್ದೀರಿ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಯಡಿಯೂರಪ್ಪ ಅವರು ಭಾಗವಹಿಸಿದ್ದರು. 

ಪ್ರತಿಕ್ರಿಯಿಸಿ (+)