ಮಂಗಳವಾರ, ಫೆಬ್ರವರಿ 25, 2020
19 °C

ನೈರುತ್ಯ ರೈಲ್ವೆ ಐದು ನಿಲ್ದಾಣಗಳಿಗೆ ಐಎಸ್‌ಒ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರೈಲು ನಿಲ್ದಾಣದಲ್ಲಿ ಉತ್ತಮ ಪರಿಸರ ನಿರ್ವಹಣಾ ವ್ಯವಸ್ಥೆ ಅಳವಡಿಸಿಕೊಂಡ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಹೊಸಪೇಟೆ, ಬಳ್ಳಾರಿ, ವಿಜಯಪುರ, ಲೋಂಡಾ ಹಾಗೂ ಗದಗ ನಿಲ್ದಾಣಗಳಿಗೆ ವಿಶ್ವದರ್ಜೆಯ ಗುಣಮಟ್ಟ (ಐಎಸ್‌ಒ 14001–2015) ಪ್ರಮಾಣಪತ್ರ ಲಭಿಸಿದೆ.

ಅಂತರರಾಷ್ಟ್ರೀಯ ನಿರ್ವಹಣಾ ವ್ಯವಸ್ಥೆ ಪ್ರಮಾಣಿಕೃತ ಸಂಸ್ಥೆಯ ಪ್ರತಿನಿಧಿಗಳಿಂದ ಸೋಮವಾರ ಐದೂ ನಿಲ್ದಾಣದ ಪರವಾಗಿ ಹುಬ್ಬಳ್ಳಿ ರೈಲು ನಿಲ್ದಾಣದ ಡಿಆರ್‌ಎಂ ಅರವಿಂದ್‌ ಮಾಲ್ಖೇಡೆ ಅವರು ಪ್ರಮಾಣ ಪತ್ರ ಸ್ವೀಕರಿಸಿದರು.

ಈ ಹಿಂದೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ವಾಸ್ಕೋ ರೈಲು ನಿಲ್ದಾಣಗಳಿಗೆ ಐಎಸ್‌ಇ ಪ್ರಮಾಣಪತ್ರ ಲಭಿಸಿತ್ತು. ಆ ಮೂಲಕ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಸೌಕರ್ಯ ಹೊಂದಿರುವ ನಿಲ್ದಾಣದ ಸಂಖ್ಯೆ 9ಕ್ಕೆ ಏರಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮಾರ್ಗಸೂಚಿ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟ ಸಂಸ್ಥೆ ನಿಗದಿಪಡಿಸಿದ ಮಾನದಂಡದಂತೆ ಪ್ರಯಾಣಿಕರಿಗಾಗಿ ಒದಗಿಸಿರುವ ಸವಲತ್ತು, ನೈರ್ಮಲ್ಯ, ವಿಶ್ರಾಂತಿ ಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕಾಯ್ದಿರಿಸಿದ ಕೊಠಡಿ ಹಾಗೂ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಆಧರಿಸಿ ಐಎಸ್‌ಒ ಪ್ರಮಾಣಪತ್ರ ನೀಡಲಾಗಿದೆ.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್‌.ಕೆ.ಝಾ, ಹಿರಿಯ ವಿಭಾಗೀಯ ಮೆಕ್ಯಾನಿಕಲ್‌ ಎಂಜಿನಿಯರ್‌ ಎಸ್.ಕೆ ಭಟ್ಟಾಚಾರ್ಯ, ಅಂತರರಾಷ್ಟ್ರೀಯ ಮಟ್ಟದ ನಿರ್ವಹಣಾ ವ್ಯವಸ್ಥೆ ಪ್ರಮಾಣೀಕೃತ ಸಂಸ್ಥೆಯ ವೀರೇಂದ್ರ ಶರ್ಮಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು