ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ಇರಿಲಾಗಿದೆ ಎಂಬ ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ಬಹುತೇಕ ವಾಟ್ಸಾಪ್‌ಗ್ರೂಪ್‌ಗಳಲ್ಲಿ ಸೆಟಿಂಗ್ಸ್, ಸ್ಟೇಟಸ್‌ಗಳು ಬದಲಾಗಿವೆ.

ಮುಂಜಾನೆಯಿಂದಲೇ ಬಹುತೇಕ ಗ್ರೂಪ್‌ಗಳುonly admin can send messages ಎಂದಾಗಿವೆ. ಕೆಲ ಧಾರ್ಮಿಕ ಗುಂಪುಗಳ ಗ್ರೂಪ್ ಐಕಾನ್ ಆಗಿದ್ದ ರಾಮನ ಜಾಗದಲ್ಲಿ ಕೃಷ್ಣ, ವೆಂಕಟರಮಣನಂಥ ವಿವಾದಾತೀತ ದೇವರುಗಳು ಬಂದಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ತೀರ್ಪು: ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು

ಕೆಲವರು ದೇವರು, ಧರ್ಮಗಳ ಉಸಾಬರಿಯೇ ಬೇಡವೆಂದು ಸೂರ್ಯೋದಯದಂಥ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಆದರೆ ಚಂದ್ರನ ಚಿತ್ರಗಳನ್ನು ಅವಾಯ್ಡ್ ಮಾಡಲಾಗುತ್ತಿದೆ.

ಕೆಲ ಗುಂಪುಗಳ ಅಡ್ಮಿನ್‌ಗಳುತಮ್ಮ ಸದಸ್ಯರಿಗೆ ನಿನ್ನೆಯೇ 'ಕೋಮು ಭಾವನೆ ಪ್ರಚೋದಿಸುವ ಸಂದೇಶ ಕಳಿಸಬಾರದೆಂದು' ತಿಳಿ ಹೇಳಿದ್ದಾರೆ.

‘ವಾಟ್ಸಾಪ್ ಗ್ರೂಪಿನಲ್ಲಿ ಬರುವ ಮೆಸೇಜುಗಳನ್ನು ಪೊಲೀಸರು ಗಮನಿಸುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವ ಮೆಸೇಜುಗಳಿದ್ದರೆ ಅಡ್ಮಿನ್ಗಳನ್ನು ಹೊಣೆ ಮಾಡಲಾಗುವುದು ಎಂದಿದ್ದಾರೆ. ಹೀಗಾಗಿ ನಾನು ನಮ್ಮ ಗ್ರೂಪ್ ಸೆಟಿಂಗ್ ಬದಲಿಸಿ, admin only ಮಾಡಿದ್ದೇನೆ. ನಾಡಿದ್ದು ಹೀಟ್ ನೋಡಿಕೊಂಡು ಮತ್ತೆ anyone can postಗೆ ಸೆಟಿಂಗ್ ಬದಲಿಸುತ್ತೇನೆ' ಎಂದು ಸುರುಚಿ ಗ್ರೂಪ್‌ನಅಡ್ಮಿನ್ ರಾಘವೇಂದ್ರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

'ವಾಟ್ಸಾಪ್ ಮೆಸೇಜ್‌ಗಳುಗೂಢಲಿಪಿಯಲ್ಲಿರುತ್ತವೆ. ಅದನ್ನು ಬ್ರೇಕ್ ಮಾಡಿ ನಿಗಾ ಇರಿಸುವುದು ಸುಲಭವಲ್ಲ' ಎಂಬ ಸಂದೇಶಗಳೂ ಹರಿದಾಡುತ್ತಿವೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ಹೆಸರಿನಲ್ಲಿರುವ ಎಚ್ಚರಿಕೆಯ ಸಂದೇಶ ಬಹುತೇಕ ಗುಂಪುಗಳಲ್ಲಿ ಹರಿದಾಡುತ್ತಿದೆ.

ಇನ್ನಷ್ಟು...

ಅಯೋಧ್ಯೆ ತೀರ್ಪು: ‘ಸುಪ್ರೀಂ’ ನ್ಯಾಯಪೀಠ ಹೇಳಿದ್ದಿಷ್ಟು...

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ: ಏನಿದು ದಶಕಗಳ ವ್ಯಾಜ್ಯ

ಅಯೋಧ್ಯೆ ಧ್ವಂಸ ಪ್ರಕರಣ: ವ್ಯಾಜ್ಯಕ್ಕೆ ಒಂದೂವರೆ ಶತಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.