ರಾಮನಗರ: ರಾಜ್ಯದಲ್ಲಿ ಈವರೆಗೆ 75 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ರಾಮನಗರದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸರ್ಕಾರದಿಂದ ಈಗಾಗಲೇ ವೆಂಟಿಲೇಟರ್‌ಗಳ ಖರೀದಿ ನಡೆದಿದೆ. ವಿದೇಶಗಳಿಂದ ಮಾಸ್ಕ್, ಇತರೆ ಮೆಡಿಕಲ್ ಸಾಮಗ್ರಿಗಳನ್ನು ತರಿಸುವ ಪ್ರಯತ್ನ ನಡೆದಿದೆ. ಪ್ರತಿ ಜಿಲ್ಲೆಯಲ್ಲೂ ಕೋವಿಡ್-19 ವಿಶೇಷ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದೆ’ ಎಂದರು.

ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ: ಈ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದವರು ತಪಾಸಣೆ ಮಾಡಿಸಿ

ಪೊಲೀಸರು ಜನರಿಗೆ ಲಾಠಿಯಲ್ಲಿ ಹೊಡೆಯುವುದು, ಜನರು ಪೊಲೀಸರ ಮೇಲೆಯೇ ಹಲ್ಲೆ ಮಾಡುವ ಘಟನೆಗಳು ನಡೆಯಬಾರದು. ಆರೋಗ್ಯದ ಹಿತದೃಷ್ಟಿಯಿಂದ ಜನರು ಮನೆ ಬಿಟ್ಟು ಹೊರ ಬರಬಾರದು ಎಂದು ಅವರು ಸಲಹೆ ನೀಡಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಹೋಮ್ ಕ್ವಾರಂಟೈನ್ ಅವಧಿಯನ್ನು 14ರಿಂದ 28 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದರು.

ಸಚಿವರ ಸಭೆಯಲ್ಲೇ ಸಾಮಾಜಿಕ ಅಂತರಕ್ಕೆ ತಿಲಾಂಜಲಿ

ಶ್ರೀರಾಮಲು ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್)ನಿಯಮ ಪಾಲನೆಯಾಗಲಿಲ್ಲ.

ಸಚಿವರ ಪಕ್ಕ ಕೆಲವೇ ಅಡಿಗಳ ಅಂತರದಲ್ಲಿ ಸಂಸದ ಡಿ.ಕೆ. ಸುರೇಶ್, ಅಧಿಕಾರಿಗಳು ಕುಳಿತಿದ್ದರು. ಹಿಂದೆಯೇ ಅವರ ಆಪ್ತ ಸಹಾಯಕರು ಇದ್ದರು. ಕೆಲವರು ಮಾಸ್ಕ್ ಸಹ ಧರಿಸಿರಲಿಲ್ಲ. ಸಚಿವರು ಕೋವಿಡ್-19 ವಿಶೇಷ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭವೂ ಅವರ ಹಿಂದೆ ಅಧಿಕಾರಿಗಳು, ಆಪ್ತ ಸಹಾಯಕರು ಹಿಂಡುಹಿಂಡಾಗಿ ಓಡಾಡಿದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಜನರಲ್ಲಿ ಕೋವಿಡ್-19 ದೃಢ, ಬಾಧಿತರ ಸಂಖ್ಯೆ 9ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.