ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಈಗಿನ ಆಡಳಿತವನ್ನು ಪುನರ್ರಚಿಸಬೇಕು. ಕ್ಷೇತ್ರ ನಿರ್ದೇಶಕರ ಮೇಲಿರುವ ಹೊರೆಯನ್ನು ತಗ್ಗಿಸಲು ಹಾಗೂ ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕನಿಷ್ಠ ಎರಡು ಅಥವಾ ಮೂರು ಉಪನಿರ್ದೇಶಕರ ಹುದ್ದೆಗಳನ್ನು ಸೃಜಿಸಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸಲಹೆ ನೀಡಿದೆ.

ಬಂಡೀಪುರದಲ್ಲಿ ಇತ್ತೀಚೆಗೆ ಕಾಳ್ಗಿಚ್ಚು ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿರುವ ಪ್ರಾಧಿಕಾರ ಈ ಕುರಿತು ವರದಿ ಸಿದ್ಧಪಡಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದುಕೆರೆ ವಲಯಗಳಲ್ಲಿ ಫೆಬ್ರುವರಿ 25, 26 ಹಾಗೂ 27ರಂದು ಸ್ಥಳ ಪರಿಶೀಲನೆ ನಡೆಸಿರುವ ಪ್ರಾಧಿಕಾರದ ದಕ್ಷಿಣ ವಲಯ ಸಹಾಯಕ ಅರಣ್ಯ ಮಹಾ ನಿರೀಕ್ಷಕರು ವರದಿಯಲ್ಲಿ ಯಾರ ಕಡೆಯೂ ಬೊಟ್ಟು ಮಾಡಿಲ್ಲ. ಅದರ ಬದಲು, ಭವಿಷ್ಯದಲ್ಲಿ ಬೆಂಕಿ ನಿಯಂತ್ರಣ ಹಾಗೂ ತಡೆ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವರು ಪ್ರಾಧಿಕಾರದ ಕೇಂದ್ರ ಕಚೇರಿಗೆ ಸಲ್ಲಿಸಿರುವ ವರದಿಯ ಸಾರಾಂಶ ಇಂತಿದೆ.

* ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ನಿರ್ವಹಣಾ ಯೋಜನೆಯನ್ನು ತಯಾರಿಸಬೇಕು. ಅದರಲ್ಲಿ ಬೆಂಕಿಗೆ ತುತ್ತಾಗುವ ಪ್ರದೇಶಗಳನ್ನು ನಕಾಶೆಯಲ್ಲಿ ಗುರುತಿಸಿ ಈಗಿರುವ ಬೆಂಕಿ ರೇಖೆಗಳ ಜಾಲ, ಬೆಂಕಿ ನಿಯಂತ್ರಿಸಲು ಬೇಕಾಗುವ ಮಾನವ ಬಲ, ಸರಂಜಾಮುಗಳು, ಕ್ಷೇತ್ರ ಸಿಬ್ಬಂದಿಗೆ ಅಣಕು ಕಾರ್ಯಾಚರಣೆ, ಬೆಂಕಿ ನಿಯಂತ್ರಣ ಕುರಿತ ತಂತ್ರಗಾರಿಕೆ, ಬೆಂಕಿಯಿಂದ ತುತ್ತಾದ ಪ್ರದೇಶಗಳ ನಿರ್ವಹಣೆ ಕುರಿತ ವಿವರಗಳನ್ನು ಈ ಯೋಜನೆಯು ಒಳಗೊಂಡಿರಬೇಕು.

* ಬೆಂಕಿ ನಿರ್ವಹಣೆ ಚಟುವಟಿಕೆ ಕುರಿತು ರೂಪರೇಷೆ ಸಿದ್ಧಪಡಿಸಲು ಈಗಿರುವ ಬೆಂಕಿ ರೇಖೆಗಳನ್ನು ಜಿಐಎಸ್ ಮಾಹಿತಿ ಆಧಾರದಲ್ಲಿ ಡಿಜಿಲೀಕರಣ ಮಾಡಬಹುದು. ಕಾಡಿನ ಬೆಂಕಿಗೆ ಗುರಿಯಾಗುವ ಗ್ರಾಮಗಳು ಅಥವಾ ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳೊಂದಿಗೆ ನಿರಂತರ ಸಭೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.

* ಮಾನವ ವನ್ಯಜೀವಿ ಸಂಘರ್ಷ ದಿಂದ ಹಾನಿಗೀಡಾದವರಿಗೆ ಸಕಾಲದಲ್ಲಿ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು.

* ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಹಾಗೂ ನಾಸಾ ಒದಗಿಸುವ ಬೆಂಕಿ ಎಚ್ಚರಿಕೆ ಮಾಹಿತಿಗಳನ್ನು ಬಳಸಿಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

* ಕೇರಳ ಹಾಗೂ ತಮಿಳುನಾಡು ಅರಣ್ಯ ಇಲಾಖೆಗಳ ಜೊತೆ ಆಗಾಗ ಅಂತರರಾಜ್ಯ ಸಮನ್ವಯ ಸಭೆ ನಡೆಸಬೇಕು.

* ಬಂಡೀಪುರದಲ್ಲಿ ಕ್ಷೇತ್ರ ರಚನೆಗಳ ಗಸ್ತು ಪ್ರಯತ್ನಗಳ ಮೇಲೆ ನಿಗಾ ವಹಿಸಲು ಆದ್ಯತೆ ಮೇಲೆ ಎಂ–ಸ್ಟ್ರೈಪ್ಸ್ ತಂತ್ರಾಂಶ ಅಳವಡಿಸಬೇಕು.

* ಬಂಡೀಪುರದಲ್ಲಿ ಹುಲಿ ಕೋಶ (ಟೈಗರ್ ಸೆಲ್) ಸ್ಥಾಪಿಸಬೇಕು.

* ಬೆಂಕಿ ನಿಯಂತ್ರಿಸಲು ಬೇಕಾದ ರಕ್ಷಣಾತ್ಮಕ ತಡೆ ಸಾಮಗ್ರಿ, ನೀರು ಸಿಂಪಡಿಸುವ ಯಂತ್ರ (ಸುಲಭವಾಗಿ ಒಯ್ಯುವಂಥವು), ಬೆಂಕಿ ರೇಖೆಗಳನ್ನು ಸುಡಲು ಬೇಕಾಗುವ ಬ್ಲೋವರ್ಗಳಂತಹ ಸಾಮಗ್ರಿಗಳನ್ನು ಸಜ್ಜಾಗಿ ಇಟ್ಟುಕೊಳ್ಳಬೇಕು.

* ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಬೆಂಕಿ ಅವಘಡಗಳ ನೈಜ ಮಾಹಿತಿಯನ್ನು ಒದಗಿಸಬೇಕು.

* ಹುಲಿ ಮೀಸಲು ಕಾಡಿನಲ್ಲಿ ಬೆಂಕಿ ನಿಯಂತ್ರಿಸಲು ಸ್ವಯಂಸೇವಕರ ನೆರವು ಪಡೆಯಲಾಗಿತ್ತು. ಕಾಡ್ಗಿಚ್ಚು
ನಿಯಂತ್ರಣ ಅಪಾಯಕಾರಿ ಚಟುವಟಿಕೆಯಾಗಿದ್ದು, ಇಲಾಖೆಯು ಸ್ವಯಂಸೇವಕರ ಪಾತ್ರಗಳನ್ನು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಅವರಿಗೆ ವಿವರಿಸಬೇಕು.

‘ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’

‘ಕಾಳ್ಗಿಚ್ಚನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲಹೆ ನೀಡಬಹುದು.ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ನೀತಿ, ಬೆಂಕಿ ನಿಯಂತ್ರಣ ಕುರಿತು ಮಾರ್ಗಸೂಚಿಗಳ ರಚನೆ ಹಾಗೂ ಹಾನಿಗೊಳಗಾಗಿರುವ ರಾಜ್ಯಗಳಿಗೆ ವಿಪತ್ತು ನಿರ್ವಹಣೆಗೆಆರ್ಥಿಕ ಸಹಾಯ ಸಿಗಲು ನೆರವಾಗಬಹುದು’ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.