ಶನಿವಾರ, ಜುಲೈ 24, 2021
28 °C
ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ

ಕೆಪಿಎಸ್ಸಿ: ಮುಖ್ಯಪರೀಕ್ಷೆ 1250 ಅಂಕ, ವ್ಯಕ್ತಿತ್ವ ಪರೀಕ್ಷೆ 50 ಅಂಕಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ (ಗ್ರೂಪ್‌ ‘ಎ’ ಮತ್ತು ‘ಬಿ’) ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಮುಖ್ಯಪರೀಕ್ಷೆಯಲ್ಲಿ ಅಂಕವನ್ನು 1,250ಕ್ಕೆ ಇಳಿಸಿ ರಾಜ್ಯ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿದೆ.

ಈವರೆಗೆ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು (ಸಂದರ್ಶನ) 50 ಅಂಕಗಳಿಗೆ ಇಳಿಸಲಾಗಿದೆ. ಅಲ್ಲದೆ, ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಶೇ 80 ದಾಟಿದರೆ ಅಥವಾ ಶೇ 40ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣ ದಾಖಲಿಸಬೇಕು ಎಂದೂ ನಿಯಮ ಬದಲಿಸಲಾಗಿದೆ.

ಆ ಮೂಲಕ, ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ತಿದ್ದುಪಡಿ ನಿಯಮಗಳು – 2020’ನ್ನು ಮಾಡಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

ಐದು ವಿಷಯಗಳಲ್ಲಿ ಮುಖ್ಯ ಪರೀಕ್ಷೆ: ಈವರೆಗೆ ಎರಡು ಐಚ್ಚಿಕ ವಿಷಯಗಳೂ (ಪತ್ರಿಕೆ 6 ಮತ್ತು ಪತ್ರಿಕೆ 7) ಸೇರಿ ಏಳು ವಿಷಯಗಳಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಇನ್ನು ಐದು ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಐಚ್ಚಿಕ ವಿಷಯಗಳನ್ನು (ತಲಾ 250 ಅಂಕಗಳ 2 ಪತ್ರಿಕೆ) ಕೈಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಒಟ್ಟು 1,750 ಅಂಕಗಳಿಗೆ (ಒಟ್ಟು ಏಳು ಪತ್ರಿಕೆಗಳು) ನಡೆಯುತ್ತಿದ್ದ ಮುಖ್ಯಪರೀಕ್ಷೆಯಲ್ಲಿ 500 ಅಂಕ ಕಡಿತಗೊಂಡು, 1,250 ಅಂಕಗಳಿಗೆ ನಿಗದಿ ಆಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು