ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಪಾಕಿಸ್ತಾನ ಜಿಂದಾಬಾದ್’ ಎಂದ ಮತ್ತೊಬ್ಬ ಯುವತಿ ಆರ್ದ್ರಾ

Last Updated 22 ಫೆಬ್ರುವರಿ 2020, 1:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪುರಭವನದ ಎದುರು ಕನ್ನಡ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಆರ್ದ್ರಾ ಎಂಬಯುವತಿ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

ಯುವತಿಯನ್ನು ವಶಕ್ಕೆ ಪಡೆದಿರುವ ಎಸ್‌ಜೆ ಪಾರ್ಕ್ ಪೊಲೀಸರು, ಠಾಣೆಗೆ ಕರೆದೊಯ್ದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ಪ್ರತಿಭಟನೆ ವೇಳೆ ಯುವತಿ ಕರಪತ್ರ ಹಿಡಿದುಕೊಂಡು ಕುಳಿತಿದ್ದರು. ಏಕಾಏಕಿ ಘೋಷಣೆ ಕೂಗಿದ್ದಾರೆ. ಆಕೆ ಮಲ್ಲೇಶ್ವರ ನಿವಾಸಿ. ಖಾಸಗಿ ಕಂಪನಿ ಉದ್ಯೋಗಿ ಎಂಬುದು ತಿಳಿದುಬಂದಿದೆ’ ಎಂದು ಡಿಸಿಪಿ ಚೇತನ್‌ಸಿಂಗ್ ಹೇಳಿದರು.

ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಪುರಾವೆ ಇಲ್ಲ
ಪಾಕ್ ಪರ ಯುವತಿ ಘೋಷಣೆ ಕೂಗಿದ್ದಾಳೆಂದು ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಹೇಳಿದರು‌.

‘ಯುವತಿ ಭಿತ್ತಿಪತ್ರ ಮಾತ್ರ ಪ್ರದರ್ಶಿಸಿದ್ದಾರೆ. ಘೋಷಣೆ ಕೂಗಿದ ಬಗ್ಗೆ ಕೆಲವರು ಆರೋಪ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಿಂದ ಯುವತಿಯನ್ನು ಠಾಣೆಗೆ ಕರೆತರಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT