ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಬಾರ್‌ಗೆ ಕನ್ನ: ಮದ್ಯ, ಹಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರ ಬಸ್ ನಿಲ್ದಾಣ ಸಮೀಪದ ನರ್ತಕಿ ಬಾರ್ ಬಾಗಿಲು ಮುರಿದು ₹ 20 ಸಾವಿರ ಮೌಲ್ಯದ ಮದ್ಯ ಹಾಗೂ ₹ 8 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಮದ್ಯದಂಗಡಿಯ ಹಿಂಭಾಗದ ಬಾಗಿಲು ಮುರಿದು ಕೃತ್ಯ ಎಸಗಲಾಗಿದೆ. ಮದ್ಯದಂಗಡಿ ಮಾಲೀಕರು ಪರಿಶೀಲಿಸಿದ ಬಳಿಕ ಕೃತ್ಯ ಗೊತ್ತಾಗಿದೆ.

ಮದ್ಯ ಸಿಗದೆ ಬೇಸರಗೊಂಡವರೇ ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾರ್ ಸಮೀಪ ಮಲಗಿದ್ದ ನಿರ್ಗತಿಕನಿಗೂ ಕಳವು ಮಾಡಿದ ಮದ್ಯ ನೀಡಿ ಪರಾರಿಯಾಗಿದ್ದಾರೆ. ಸಿಪಿಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು