ಭಾನುವಾರ, ಜನವರಿ 26, 2020
18 °C
ಪ್ರಜಾವಾಣಿ ‘ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ 2020’

ಮಾಲತಿ ಹೆಗಡೆಗೆ ಪ್ರಥಮ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2020ನೇ ಸಾಲಿನ ಪ್ರಜಾವಾಣಿ ‘ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ. ಮಾಲತಿ ಹೆಗಡೆಯವರು ಬರೆದ ‘ಜೀವದಾಯಿನಿಯರ ಜಲಗಾಥೆ!’ ಮೊದಲ ಬಹುಮಾನ ಪಡೆದಿದೆ.

ನಳಿನಿ ಟಿ. ಭೀಮಪ್ಪ ಅವರು ಬರೆದ ‘ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?’ ಹಾಗೂ ನಿರ್ಮಲಾ ಶೆಟ್ಟರ ಅವರ ‘ಅಲಂಕಾರಕ್ಕೆ ಸೈ.. ಆಪದ್ಬಾಂಧವಳಿಗೆ ಜೈ!’ ಪ್ರಬಂಧಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದಿವೆ. ಕಲ್ಪನಾ ಪ್ರಭಾಕರ್‌ ಸೋಮನಳ್ಳಿಯವರ ‘ಎಮ್ಮಾಯಣ’ ಮತ್ತು ಲಲಿತಾ ಕೆ. ಹೊಸಪ್ಯಾಟಿಯವರ ‘ಏರಿದ ಬಸ್ಸಲಿ ಬೆರೆತಾಗ!’ ಪ್ರಬಂಧಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಹಿರಿಯ ಕಥೆಗಾರ್ತಿ ವಸುಮತಿ ಉಡುಪ ಹಾಗೂ ಪ್ರಬಂಧ ಬರಹಗಾರ ಈರಪ್ಪ ಎಂ. ಕಂಬಳಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರತಿಕ್ರಿಯಿಸಿ (+)