ವಿಪಕ್ಷ ನನ್ನನ್ನೇ ಅಪರಾಧಿ ಎನ್ನುತ್ತಿದೆ, ನನ್ನನ್ನೂ ಸೇರಿಸಿ ತನಿಖೆಯಾಗಲಿ: ಸಿಎಂ

7
‘ಇಡೀ ದೇಶಕ್ಕೆ ರಾಜ್ಯದಿಂದ ಸಂದೇಶ ಹೋಗಲಿ’

ವಿಪಕ್ಷ ನನ್ನನ್ನೇ ಅಪರಾಧಿ ಎನ್ನುತ್ತಿದೆ, ನನ್ನನ್ನೂ ಸೇರಿಸಿ ತನಿಖೆಯಾಗಲಿ: ಸಿಎಂ

Published:
Updated:

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶಕ್ಕೆ ಮಾದರಿಯಾದ ಆದೇಶ ರಾಜ್ಯದಿಂದ ಹೋಗಬೇಕಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಆಡಿಯೊ ಬಿಡುಗಡೆ ಮೇಲಿನ ಚರ್ಚೆ ವೇಳೆ ವಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಹಾಗೂ ಸದಸ್ಯರ ಆಪಾದನೆಗಳು ಹಾಗೂ ತನಿಖೆಯನ್ನು ಎಸ್‌ಐಟಿಗೆ ವಹಿಸುವುದು ಬೇಡ ಎಂದು ಆಗ್ರಹ, ಒತ್ತಡಗಳು ಬಂದ ಬಳಿಕ ಸಿಎಂ ಪ್ರತಿಕ್ರಿಯಿಸಿ ಮಾತನಾಡಿದರು.

ಕುಮಾರಸ್ವಾಮಿ ಪ್ರತಿಕ್ರಿಯೆಯ ಮುಖ್ಯಾಂಶಗಳು...

* ಎರಡು ನಿಮಿಷದ್ದನ್ನೇ ಅರಗಿಸಿಕೊಳ್ಳಲೇ ನಿಮಗೆ ಆಗಿಲ್ಲ. ಇನ್ನು ಪೂರ್ಣ ಆಡಿಯೊ ಬಿಡುಗಡೆ ಮಾಡಿದ್ದರೆ ಏನಾಗುತ್ತಿತ್ತೊ. ಅದನ್ನೂ ಬಿಡುಗಡೆ ಮಾಡೋಣ ಬಿಡಿ.

* ಘಟನೆಗಳಲ್ಲಿ ನನ್ನಿಂದಲೇ ತಪ್ಪಾಗಿದ್ದರೆ ನನ್ನನ್ನೂ ಸೇರಿಸಿಕೊಂಡು ತನಿಖೆಯಾಗಲಿ. ನಾನು ಅಪರಾಧ ಮಾಡಿದ್ದರೆ ತಲೆ ಬಾಗುತ್ತೇನೆ. ಶಿಕ್ಷೆ ಅನುಭವಿಸುತ್ತೇನೆ.

* ಇದನ್ನೂ ಓದಿ: ರೆಬೆಲ್‌ ಶಾಸಕರ ಭವಿಷ್ಯ: ಮುಂದಿರುವ ಏಳು ಹಾದಿಗಳು

* ಯಾರ ಮೇಲು ದ್ವೇಷದ ರಾಜಕಾರಣ ಮಾಡಲು ಸಿದ್ಧನಿಲ್ಲ.

* ತಾವು(ಅಧ್ಯಕ್ಷರು) ನಿನ್ನೆ(ಸೋಮವಾರ) ಸೂಚನೆ ನೀಡಿರುವಂತೆ ತನಿಖೆ ನಡೆಸಲು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿ.

* ಸಿದ್ದರಾಮಯ್ಯ ನಮ್ಮ ನಾಯಕ. ಅವರನ್ನು ನೆಚ್ಚಿಕೊಂಡು ಅವರ ಕೆಲ ಶಾಸಕರು ಗೆದ್ದು ಬಂದಿದ್ದಾರೆ.

* ನಾನು ವಿಷ ಕಂಠಕನಾಗಿದ್ದೇನೆ.

 * ಇದನ್ನೂ ಓದಿ: ನಕಲಿ ಆಡಿಯೊ ಬಿಡುಗಡೆ ಮಾಡಿ ಸಿಎಂ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ: ಬಿಎಸ್‌ವೈ 

* ಸರ್ಕಾರ ಇಂದು, ನಾಳೆ ಬೀಳುತ್ತೆ ಎಂದು ವಿಪಕ್ಷ ಸದಸ್ಯರು ಗಡುವು ನೀಡುತ್ತಿದ್ದರು. ಸಂಕ್ರಾಂತಿ ಹೋಯಿತು. ಬಜೆಟ್‌ ಮಂಡನೆಯೇ ಆಗಲ್ಲ ಎಂದರು. ಮಂಡನೆಯೂ ಆಯಿತು.

* ವಿಪಕ್ಷ ನಾಯಕರು, ಸದಸ್ಯರು ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು.

* ನಾನು ಶಾಶ್ವತವಾಗಿ ಗೂಟ ಬಡಿದುಕೊಂಡು ಇರುವುದಿಲ್ಲ. ಪ್ರಧಾನಿ ಸ್ಥಾನವನ್ನೇ ಬಿಟ್ಟುಕೊಟ್ಟು ಬಂದವರು ಎಂದು ಹಿಂದೆ ಹೇಳಿದ್ದೆ. ಅದೇ ಮಾತನ್ನು ಈಗಲೂ ಹೇಳುವೆ. 

* ವಿಧಾನಸಭೆ ಚುನಾವಣೆ ವೇಳೆ ಪರಸ್ಪರ ಸಂಘರ್ಷದ ಹೋರಾಟದಿಂದಲೇ ನಮಗೆ ಶಕ್ತಿ ಬಂದಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಸಭೆ ಮಾಡಿ, ಚರ್ಚೆ ನಡೆಸಿದ್ದಾರೆ. ನನ್ನನ್ನು ಸಿಎಂ ಮಾಡಿದ್ದಾರೆ.

* ಅತಂತ್ರ ಬಂದಾಗ ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್‌ ಶಾಸಕರು ಒಮ್ಮತದ ನಿರ್ಣಯಕ್ಕೆ ಬಂದರು. ನಾಯಕರ ಉದ್ದೇಶ ಅರ್ಥಮಾಡಿಕೊಂಡಿದ್ದೇನೆ.

* ಇದನ್ನೂ ಓದಿ: 2008ರಿಂದ ಎಲ್ಲ ಪ್ರಕರಣಗಳು ತನಿಖಾ ವ್ಯಾಪ್ತಿಗೆ: ಸದನದಲ್ಲಿ ಬಿಜೆಪಿ ಪಟ್ಟು

* ನಾವು ಬಡಿದಾಡಿಕೊಳ್ಳುವವರೆಗೆ ನೀವು ಕಾಯಬೇಕಿತ್ತು. ಯಾಕೆ ಆತುರಪಟ್ಟಿರಿ ಎಂದು ವಿಪಕ್ಷ ಸದಸ್ಯರಿಗೆ ಸಿಎಂ ಕುಟುಕಿದರು.

* ಮುಂದಿನ ಚುನಾವಣೆಗೆ ದೇಶಕ್ಕೆ ಕರ್ನಾಟಕದಿಂದ ಒಂದು ಸಂದೇಶ ಹೋಗಬೇಕು ಎಂಬ ಉದ್ದೇಶದಿಂದ ಏನೇ ಸಮಸ್ಯೆ ಬಂದರೂ ಕಲ್ಲು ಬಂಡೆಯಂತೆ ಹೊರಟಿದ್ದೇವೆ.

* ಪ್ರಾಮಾಣಿಕ ರಾಜಕಾರಣದ ಬಗ್ಗೆ ಎಲ್ಲರೂ ಆತ್ಮ ವಿಮರ್ಶೆ ಮಾಡಬೇಕು.

* ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶಕ್ಕೆ ಮಾದರಿಯಾದ ಆದೇಶ ರಾಜ್ಯದಿಂದ ಬರಬೇಕು ಎಂದು ಮುಖ್ಯಮಂತ್ರಿ ಹೇಳಿದರು.
 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !