ಬುಧವಾರ, ಏಪ್ರಿಲ್ 8, 2020
19 °C

ದೆಹಲಿ ಗಲಭೆಗೆ ಬಿಜೆಪಿ ಪ್ರಚೋದನೆ ಕಾರಣ: ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದೆಹಲಿಯ ಗಲಭೆಗೆ ಬಿಜೆಪಿ ನಾಯಕರ ಪ್ರಚೋದನೆಯೇ ಕಾರಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಬಿಡದಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಬಿಜೆಪಿಯವರು ಒಂದು ಕಡೆ ಟ್ರಂಪ್‌ರನ್ನು ಕರೆದುಕೊಂಡು ಬಂದು ಗುಜರಾತಿ‌ನಲ್ಲಿ ಮೆರವಣಿಗೆ ಮಾಡುತ್ತಾರೆ. ಮತ್ತೊಂದೆಡೆ ದೆಹಲಿಯಲ್ಲಿ ಗಲಭೆ ಆಗುತ್ತದೆ. ಇವರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ. ಇದು ಹಿಂದೂ ರಾಷ್ಟ್ರ ವೇ, ಬಿಜೆಪಿಯವರು ಹೊಸದಾಗಿ ಮಾಡಬೇಕಿಲ್ಲ. ಕಾಲಚಕ್ರ ಬದಲಾದಂತೆ ಜನರು ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಾರೆ’ ಎಂದರು. 

ದೊರೆಸ್ವಾಮಿ ಬಗ್ಗೆ ಶಾಸಕ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ದೊರೆಸ್ವಾಮಿ ಹೋರಾಟ ಮಾಡಿದಾಗ ಇವರು ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಯಾವ್ದೊ ಆರ್‌ಎಸ್‌ಎಸ್‌ ಫಲಕ, ತಿಲಕ ಇಟ್ಟುಕೊಂಡು ಬಂದವೆ. ಆಟಾಡ್ತಾವೆ. ಆಡಲಿ ಬನ್ನಿ’ ಎಂದರು. 

ಸಚಿವ ನಾರಾಯಣ ಗೌಡ ಮಹಾರಾಷ್ಟ್ರ ಕ್ಕೆ ಜೈಕಾರ ಹಾಕಿದ ಕುರಿತು ಮಾತನಾಡಿ 'ಮಹಾರಾಷ್ಟ್ರದ ತಾಕತ್ತು ದೊಡ್ಡದ, ಮಂಡ್ಯ ತಾಕತ್ತು ದೊಡ್ಡದ ಎಂದು ಮುಂದೆ ಜನರೇ ತೀರ್ಮಾನ ಮಾಡುತ್ತಾರೆ' ಎಂದರು.

ಜೆಡಿಎಸ್ ಶಾಸಕರ ಸಭೆಗೆ ಕೆಲವು ಶಾಸಕರು ಗೈರಾದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಯಾರೋ 3- 4 ಶಾಸಕರು ಪಕ್ಷದಿಂದ ಹೊರ ಹೋದ ಮಾತ್ರಕ್ಕೆ ಏನೂ ಆಗುವುದಿಲ್ಲ. ರಾಜಕಾರಣದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ. ಕಾಂಗ್ರೆಸ್ ಹಾಗೂ ಬಿಜೆಪಿ ಯಾವ ಕ್ಷೇತ್ರಗಳಲ್ಲಿ ಅವರ ಶಕ್ತಿ ಬೆಳೆಸಿಕೊಳ್ಳಲೂ ಆಗಲಿಲ್ಲವೋ ಅಲ್ಲಿ ನಮ್ಮ ಶಾಸಕರ ತಲೆ ಕೆಡಿಸಿ ಕರೆದುಕೊಂಡು ಪಕ್ಷ ಬೆಳೆಸಲು ಹೊರಟಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಹೊಸ ನಾಯಕನನ್ನು ಹುಡುಕಿಕೊಳ್ಳುತ್ತಾರೆ’ ಎಂದರು.

ದೆಹಲಿ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, ‘ದೆಹಲಿಯಲ್ಲಿ ಗಲಭೆ ನಡೆದು ಅಮಾಯಕರು ಬಲಿಯಾದರು. ಈ ಬಗ್ಗೆ ನ್ಯಾಯಾಧೀಶರು ಕೇಂದ್ರದ ವಿರುದ್ಧ ಪ್ರತಿಕ್ರಿಯೆ ನೀಡಿದ್ದರು. ಅದಕ್ಕಾಗಿ ಅವರನ್ನು ವರ್ಗಾವಣೆ ಮಾಡಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು