ಬೆಂಗಳೂರು: ಜಲಕ್ಷಾಮ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲವು ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆರ್ಎಸ್ಎಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದಾರೆ.

ಮಂಗಳವಾರ ಕೇಶವ ಕೃಪಾದಲ್ಲಿ ನಡೆದ ಸಂಘ ಪರಿವಾರದ ಸಮನ್ವಯ ಸಭೆಯಲ್ಲಿ ಜಲಕ್ಷಾಮ, ಪರಿಸರ ಸಮತೋಲನ, ಪ್ಲಾಸ್ಟಿಕ್ ಹಾವಳಿ, ಸಾಮರಸ್ಯದಂತಹ ವಿಚಾರಗಳಲ್ಲಿ ಬಿಜೆಪಿ ಮುಖಂಡರು ವ್ಯಕ್ತಿಗತ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದಾಗಿ ಸಲಹೆ ನೀಡಲಾಯಿತು.

ರಾಜ್ಯದ ಬಹುತೇಕ ಪ್ರದೇಶ ಹಲವು ವರ್ಷಗಳಿಂದ ಬರದಿಂದ ಕಂಗೆಟ್ಟಿದೆ. ಈ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಅಲ್ಪ ಮತ್ತು ದೀರ್ಘಾವಧಿಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂಬುದಾಗಿ ಸಂಘದ ಹಿರಿಯರು ಸೂಚಿಸಿದರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ನದಿ ಜೋಡಣೆ ಅಸಾಧ್ಯ. ಈಗಿರುವ ನದಿಗಳೇ ಒಣಗಿ ಹೋಗಿವೆ. ಕೆರೆ–ಕುಂಟೆಗಳೂ ಬರಡಾಗಿವೆ. ಇವುಗಳು ತುಂಬುವಂತೆ ಮಾಡಲು ಯಾವ ಕ್ರಮ ತೆಗೆದುಕೊಳ್ಳಬೇಕು ಮತ್ತು ಹಸಿರು ವಿಸ್ತರಣೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಸರ್ಕಾರಗಳ ಕೆಲಸಗಳಿಗೆ ಪೂರಕವಾಗಿ ಜನಜಾಗೃತಿ ಮೂಡಿಸಬೇಕು ಎಂಬ ಸಲಹೆ ವ್ಯಕ್ತವಾಯಿತು ಎಂದೂ ರವಿ ತಿಳಿಸಿದರು.

ಬಿಜೆಪಿ ಸದಸ್ಯತ್ವ ಸಂಖ್ಯೆ ದ್ವಿಗುಣ ಗುರಿ: ರಾಜ್ಯ ಬಿಜೆಪಿ ಸದಸ್ಯತ್ವ ಸಂಖ್ಯೆಯನ್ನು ದ್ವಿಗುಣಗೊಳಿಸಲು ಉದ್ದೇಶಿಸಿದ್ದು, ಸುಮಾರು 1.50 ಕೋಟಿ ಸದಸ್ಯರನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ.

ಈ ಸಂಬಂಧ ಬುಧವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಕರೆಯಲಾಗಿದ್ದು, ಇದೇ 22 ರಂದು ಕಾರ್ಯಾಗಾರವೊಂದನ್ನು ಆಯೋಜಿಸಿರುವುದಾಗಿ ಸದಸ್ಯತ್ವ ಅಭಿಯಾನದ ಉಸ್ತುವಾರಿ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಜನಸಂಖ್ಯೆಯಲ್ಲಿ ಶೇ 20 ರಷ್ಟು ಜನರನ್ನು ಸದಸ್ಯರನ್ನಾಗಿಸುವುದು ನಮ್ಮ ಗುರಿ. ಈಗ 80 ಲಕ್ಷ ಸದಸ್ಯರನ್ನು ಪಕ್ಷ ಹೊಂದಿದೆ. ಹೊಸ ಅಭಿಯಾನದಿಂದ ಸುಮಾರು 80 ಲಕ್ಷದಷ್ಟು ಸದಸ್ಯರನ್ನಾಗಿಸುವ ಉದ್ದೇಶವಿದೆ’ ಎಂದರು.

ಬಿಜೆಪಿ ಗೆಲುವು ನಿರಂತರವಾಗಿರಲಿ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಶೇ 50 ರಷ್ಟು ಮತ ಚಲಾವಣೆಯಾಗಿದೆ. ಈ ಗೆಲುವು ಆಕಸ್ಮಿಕವಲ್ಲ. ಎಲ್ಲ ಚುನಾವಣೆಗಳಲ್ಲೂ ಇದೇ ಪ್ರಮಾಣದಲ್ಲಿ ಮತ ಚಲಾವಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸಂಘದ ಹಿರಿಯ ಮುಖಂಡರು ತಿಳಿಸಿದರು.

ರಾಷ್ಟ್ರೀಯತೆ, ದೇಶದ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಜನತೆ ಬಿಜೆಪಿಯನ್ನು ಬೆಂಬಲಿಸಿದರು. ಎಲ್ಲ ಚುನಾವಣೆಗಳಲ್ಲೂ ಗೆಲುವು ನಿರಂತವಾಗಿ ಸಾಧಿಸಬೇಕು. ಇದಕ್ಕೆ ಸಂಘಟನಾತ್ಮಕವಾಗಿ ಶ್ರಮ ಹಾಕಬೇಕು ಮತ್ತು ಜನರ ಮನವನ್ನು ಗೆಲ್ಲುವ ಕೆಲಸ ಮಾಡಿ ಎಂಬುದಾಗಿಯೂ ತಿಳಿಸಲಾಯಿತು ಎಂದು ಸಿ.ಟಿ.ರವಿ ತಿಳಿಸಿದರು.

ಸಭೆಯಲ್ಲಿ ಆರ್ಎಸ್ಎಸ್ ಮುಖಂಡರಾದ ವಿ.ನಾಗರಾಜ್, ಮುಕುಂದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ,ಆರ್.ಅಶೋಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.