ಶನಿವಾರ, ಫೆಬ್ರವರಿ 29, 2020
19 °C

7 ಸಚಿವರ ಖಾತೆ ಬದಲಾವಣೆ: ಯಾರಿಗೆ ಯಾವ ಖಾತೆ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾತೆಗಳ ಬಗ್ಗೆ ಅಸಮಾಧಾನಗೊಂಡ ಸಚಿವರ ಸಂಖ್ಯೆ ಹೆಚ್ಚಾದ ಬೆನ್ನಲ್ಲೆ  ಮಂಗಳವಾರ ಸಂಜೆ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ.

ಬಿ.ಸಿ.ಪಾಟೀಲ ಅವರಿಗೆ ಕೃಷಿ, ಕೆ. ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಶಿವರಾಂ ಹೆಬ್ಬಾರ್‌ ಅವರಿಗೆ ಕಾರ್ಮಿಕ ಖಾತೆ ಜೊತೆಗೆ ಸಕ್ಕರೆ ಖಾತೆಯನ್ನು ನೀಡಲಾಹಿದೆ. ಆನಂದ್‌ಸಿಂಗ್‌ ಅವರಿಗೆ ಅರಣ್ಯ ಮತ್ತು ಜೀವಿ ಶಾಸ್ತ್ರ ಖಾತೆ ನೀಡಲಾಗಿದೆ. 

ಸಿ.ಸಿ.ಪಾಟೀಲ್‌ ಅವರಿಗೆ ಗಣಿ ಮತ್ತು ಭೂ ವಿಜ್ಞಾನ, ಪ್ರಭು ಚೌಹಣ್‌ ಅವರಿಗೆ ಪಶುಸಂಗೋಪನೆ ಖಾತೆ ಜೊತೆಗೆ ಹಜ್‌ ಮತ್ತು ವಕ್ಫ್‌ ಖಾತೆ ನೀಡಲಾಗಿದೆ. ಶ್ರೀಮಂತ್ ಪಾಟೀಲ್‌ ಅವರಿಗೆ ಜವಳಿ ಖಾತೆ ಜೊತೆಗೆ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಯನ್ನು ನೀಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು