ಭಾನುವಾರ, ಆಗಸ್ಟ್ 25, 2019
24 °C

ಸಚಿವ ಸಂಪುಟ ರಚನೆ: 16ರಂದು ಅಮಿತ್‌ ಶಾ ಜೊತೆ ಸಿ.ಎಂ ಚರ್ಚೆ

Published:
Updated:

ಬೆಳಗಾವಿ: ‘ಸಚಿವ ಸಂಪುಟ ರಚಿಸುವ ಕುರಿತು ಚರ್ಚಿಸಲು ಇದೇ ತಿಂಗಳ 16ರಂದು ಬರುವಂತೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಆಹ್ವಾನ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಭಾರಿ ಮಳೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಅಮಿತ್‌ ಶಾ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಅವರು, ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು.

‘ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ಸಂಜೆಯೇ ನವದೆಹಲಿಗೆ ತೆರಳುವೆ. ಮರುದಿನ ಅಮಿತ್‌ ಶಾ ಜೊತೆ ಚರ್ಚಿಸಿ, ಸಚಿವ ಸಂಪುಟವನ್ನು ಅಂತಿಮಗೊಳಿಸಲಾಗುವುದು’ ಎಂದು ಹೇಳಿದರು.

Post Comments (+)