ಬುಧವಾರ, ಏಪ್ರಿಲ್ 21, 2021
23 °C

ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್‌ ಮ್ಯಾನ್‌ ಭದ್ರತೆ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಭದ್ರತೆಯನ್ನು ವಾಪಸ್ ಪಡೆಯಲಾಗಿದ್ದು, ಈ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

'ಎ' ಮತ್ತು 'ಬಿ' ಶ್ರೇಣಿ ಎಂದು ವಿಭಜನೆ ಮಾಡಿ ರಾಜ್ಯದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆಯಲಾಗಿದೆ. 

ಆರ್.ದೇಶಪಾಂಡೆ, ಬಂಡೆಪ್ಪ ಕಾಶೆಂಪುರ, ಡಿ.ಸಿ. ತಮ್ಮಣ್ಣ, ರಮೇಶ ಜಾರಕಿಹೋಳಿ, ಜಿ.ಟಿ. ದೇವೆಗೌಡ ಸೇರಿ 27 ಮಂದಿ ಮಾಜಿ ಸಚಿವರಿಗೆ ಗನ್ ಮ್ಯಾನ್ ಭದ್ರತೆ ನೀಡಲಾಗಿತ್ತು. 

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗನ್ ಮ್ಯಾನ್ ಹಾಗೂ ಮನೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.

ಡಿ.ಕೆ. ಶಿವಕುಮಾರ್‌, ಜಿ.ಪರಮೇಶ್ವರ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ಎಚ್.ಡಿ.ರೇವಣ್ಣ ಅವರಿಗೆ ‘Z’ ಶ್ರೇಣಿ ಭದ್ರತೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು