ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೋಕಾಚರಣೆಯ ದಿನವಾಗದೆ ಕ್ಯಾನ್ಸರ್‌ಗೆ ತುತ್ತಾಗುವವರ ಭವಿಷ್ಯದ ಬಗ್ಗೆ ಚಿಂತಿಸಿ’

ಸಚಿವ ಅನಂತಕುಮಾರ್‌ ನಿಧನ
Last Updated 12 ನವೆಂಬರ್ 2018, 9:44 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್‌ ಅವರ ಸಾವು ಇತರೆ ರಾಜಕಾರಣಿಗಳಿಗೆ ಪಾಠ ಕಲಿಸಲಿ ಎಂದು ಪ್ರಶಾಂತ್‌ ಮಾರುರ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪ್ರಕಟಿಸಿದ್ದಾರೆ.

ಕ್ಯಾನ್ಸರ್‌ನ ಪರಿಣಾಮ ಕುರಿತು ಬರೆದಿರುವ ಅವರು,‘ ದೇಶದಲ್ಲಿ ಪ್ರತಿದಿನ 2000ಕ್ಕೂ ಜನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಅದಕ್ಕೆ ತಕ್ಕ ಪರಿಹಾರ ಹುಡುಕುವ ಬಗ್ಗೆ ತಲೆಕೆಡಿಸಿಕೊಳ್ಳದ ಬಹುತೇಕ ರಾಜಕಾರಣಿಗಳು ಕಾಯಿಲೆಯಿಂದ ಮೃತಪಟ್ಟವರ ಬಗ್ಗೆ ಮಾಧ್ಯಮಗಳಲ್ಲಿ ವಿಧವಿಧವಾಗಿ ಕೊಂಡಾಡುವುದು ಶೋಕಾಚರಣೆಯ ಬದಲಿಗೆ ಶೋಕಿಯಂತೆ ಕಾಣುತ್ತಿದೆ. ಇದರ ಬದಲು ನೀವು (ರಾಜಕಾರಣಿಗಳು) ಸಾವು ಬರಲು ಕಾರಣವಾದ ಕಾಯಿಲೆಯನ್ನು ಹೋಗಲಾಡಿಸುವ ಬಗ್ಗೆ ಯೋಚಿಸಿದರೆ ಮೃತರ ಆತ್ಮಕ್ಕೂ ಶಾಂತಿ ಸಿಗುತ್ತದೆ.

ರಾಜಕಾರಣಿಗಳು ಸಮಾಜದಕ್ಯಾನ್ಸರ್‌ ಪೀಡಿತ ಪ್ರದೇಶಗಳಲ್ಲಿ ವಾಯುಮಾಲಿನ್ಯ ನಿಯಂತ್ರಿಸಿ, ಬೀಡಿ-ಸಿಗರೇಟು-ಗುಟ್ಕಾ-ಮದ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಅಕ್ರಮ ತಯಾರಿಕೆಗಳ ಬಗ್ಗೆ ಗಮನ ಹರಿಸಿ, ಕೆಟ್ಟ ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳ ಮಾರಾಟ ತಡೆ ಹಿಡಿಯಲು ಪ್ರಯತ್ನಿಸಿ, ರಾಸಾಯನಿಕಯುಕ್ತ ತರಕಾರಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೂ ಸುಮ್ಮನಿರುವುದು ಕ್ಯಾನ್ಸರ್‌ಗೆ ವರ್ಷಕ್ಕೆ ಸುಮಾರು 7 ಲಕ್ಷ ಭಾರತೀಯರು ಜೀವ ಕಳೆದುಕೊಳ್ಳುವಂತೆ ಮಾಡಿದೆ.

ಸಾವಿನ ಕೊನೆಯ ದಿನಗಳಲ್ಲಿ ಔಷಧಿ, ಮಾತ್ರೆಗಳಿಗೆ ಸುರಿಯುತ್ತಿರುವ ಹಣ ಹತ್ತಾರು ಸಾವಿರ ಕೋಟಿ ಇರಬಹುದು. ರಾಜಕೀಯ ವ್ಯಕ್ತಿಗಳ ಮತ್ತು ಸರ್ಕಾರಿ ನೌಕರರ ಆಸ್ಪತ್ರೆ ಖರ್ಚು ಸರ್ಕಾರ ಭರಿಸಬಹುದು, ಆದರೆ ಈ ಖಾಯಿಲೆಗೆ ತುತ್ತಾದ ಖಾಸಗಿ ನೌಕರರ ಮತ್ತು ಜನಸಾಮಾನ್ಯರು ಆಸ್ಪತ್ರೆ ಖರ್ಚಿಗಾಗಿ ಮನೆ, ಆಸ್ತಿ ಮಾರಿಕೊಂಡು ತಾವೂ ಸತ್ತು ಹೆಂಡತಿ -ಮಕ್ಕಳು ಬೀದಿಗೆ ಬರುವಂತಾಗುತ್ತಿರುವುದು ದುರಂತದ ಸಂಗತಿ ನಮ್ಮ ಕಣ್ಣಮುಂದಿದೆ.

ಅನಂತಕುಮಾರ್ ಅವರ ನಿಧನ ಉಳಿದ ರಾಜಕಾರಣಿಗಳಿಗೆ ಶೋಕಾಚರಣೆಯ ದಿನವಾಗದೆ ಕ್ಯಾನ್ಸರ್ ಕಾಯಿಲೆಗೆ ತುತ್ತಾದ-ತುತ್ತಾಗಲಿರುವ ಜನಸಾಮಾನ್ಯರ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಲಿ’ ಎಂದು ವಿವರಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT