ಶುಕ್ರವಾರ, ಜನವರಿ 17, 2020
21 °C

ಏಪ್ರಿಲ್‌ 22, 23ಕ್ಕೆ ಸಿಇಟಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದಕ್ಕಾಗಿ ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಏಪ್ರಿಲ್‌ 22 ಮತ್ತು 23ರಂದು ನಡೆಯಲಿದೆ.

22ರಂದು ಬೆಳಿಗ್ಗೆ 10.30 ರಿಂದ 11.50ರವರೆಗೆ ಜೀವವಿಜ್ಞಾನ, 2.30ರಿಂದ 3.50 ರವರೆಗೆ ಗಣಿತ, 23ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತವಿಜ್ಞಾನ, 2.30 ರಿಂದ 3.50ರವರೆಗೆ ರಸಾಯನ ವಿಜ್ಞಾನ (ಎಲ್ಲದಕ್ಕೂ ತಲಾ 60 ಅಂಕ) ನಡೆಯಲಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 24ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ (50 ಅಂಕ) ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ ಮಾಡಲು ಬಯಸುವವರು ‘ನೀಟ್‌’ ಪರೀಕ್ಷೆ, ಆರ್ಕಿಟೆಕ್ಚರ್‌ ಕೋರ್ಸ್‌ ಬಯಸುವವರು ‘ನಾಟಾ’ ಪರೀಕ್ಷೆ ಬರೆಯಬೇಕು. ಮಾಹಿತಿಗೆ http://kea.kar.nic.in.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು