ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಾನ್ವೇಷಣೆಗೆ ಮುಂಬೈ ಕರ್ನಾಟಕದ ಕೊಡುಗೆ

ಚಂದ್ರಯಾನ–2ರಲ್ಲಿ ಧಾರವಾಡದ ಪ್ರೆಷರ್ ಗೇಜ್‌, ಬೆಳಗಾವಿಯ ಸೆನ್ಸರ್‌ ಬಳಕೆ
Last Updated 24 ಜುಲೈ 2019, 19:46 IST
ಅಕ್ಷರ ಗಾತ್ರ

ಧಾರವಾಡ/ಬೆಳಗಾವಿ: ಚಂದ್ರಾನ್ವೇಷಣೆಗೆ ಹೊಸ ಭಾಷ್ಯ ಬರೆದ ‘ಚಂದ್ರಯಾನ–2’ರಲ್ಲಿ ಬಳಸಲಾದ ಪ್ರೆಷರ್‌ ಗೇಜ್‌ ಹಾಗೂ ಸೆನ್ಸರ್‌ ಉಪಕರಣಗಳನ್ನು ಮುಂಬೈ ಕರ್ನಾಟಕದ ಎರಡು ಕಾರ್ಖಾನೆಗಳು ಪೂರೈಸಿವೆ.

ಇಂಧನ ಟ್ಯಾಂಕ್‌ನಲ್ಲಿ ಬಳಸಿರುವ ಪ್ರೆಷರ್‌ ಗೇಜ್‌ ಅನ್ನು ಧಾರವಾಡ ಸಮೀಪದ ಅತ್ತಿಕೊಳ್ಳದ ತೈವಾಕ್ ಕಂಪನಿ ತಯಾರಿಸಿದ್ದರೆ, ಸೆನ್ಸರ್‌ಗಳನ್ನು ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಕಂಪನಿ ಪೂರೈಸಿದೆ.

ಏನಿದು ಪ್ರೆಷರ್ ಗೇಜ್?: ಕ್ರಯೋಜೆನಿಕ್ ಎಂಜಿನ್‌ನ ಸಿಲೆಂಡರ್‌ನಲ್ಲಿ ಇಂಧನದ ಒತ್ತಡವನ್ನು ಅಳೆಯುವ ಮಾಪಕ ಇದು. ಅತ್ಯಂತ ನಿಖರ ಮಾಹಿತಿ ನೀಡುವ ಸಾಧನ.ರಾಕೆಟ್‌ ಉಡ್ಡಯನದ ತೀರ್ಮಾನ ತೆಗೆದುಕೊಳ್ಳುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.ಲಘು ಯುದ್ಧ ವಿಮಾನ, ಸೇನಾ ನೌಕೆ, ಜಲಾಂತರ್ಗಾಮಿ, ಯುದ್ಧ ಟ್ಯಾಂಕ್‌, ಇಂಧನ ರಿಫೈನರಿ, ಉಷ್ಣ ಹಾಗೂ ಪರಮಾಣು ವಿದ್ಯುತ್‌ ಘಟಕಗಳಲ್ಲೂ ಪ್ರೆಷರ್‌ ಗೇಜ್‌ಗಳನ್ನು ಬಳಸಲಾಗುತ್ತದೆ.

‘ಚಂದ್ರಯಾನ–1 ಮತ್ತು 2ರ ಅವಧಿಯಲ್ಲಿ ಸುಮಾರು 20 ಪ್ರೆಷರ್‌ ಗೇಜ್‌ಗಳನ್ನು ಇಸ್ರೊಗೆ ಪೂರೈಸಲಾಗಿದೆ.

ಬೆಳಗಾವಿಯ ಸೆನ್ಸರ್‌

ಚಂದ್ರಯಾನ, ಮಂಗಳಯಾನ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಉಡಾಯಿಸಲಾದ ರಾಷ್ಟ್ರದ ಪ್ರಮುಖ ಉಪಗ್ರಹಗಳಿಗೆಲ್ಲ ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಕಂಪನಿಯೇ ಸೆನ್ಸರ್‌ ಪೂರೈಸಿದೆ. ಈ ಬಾರಿಯೂ ಎಂಟು ಸೆನ್ಸರ್‌ಗಳನ್ನು ಇಲ್ಲಿಂದ ಪೂರೈಸಲಾಗಿದೆ.

‘ಚಂದ್ರಯಾನ–1 ಸೇರಿದಂತೆ ಇಸ್ರೊದಿಂದ ಉಡಾಯಿಸಲಾದ ಹಲವು ಉಪಗ್ರಹಗಳಿಗೆ ಸೆನ್ಸರ್‌ ಒದಗಿಸಿದ್ದೇವೆ. ಈಗಲೂ ಕಳುಹಿಸಿದ್ದೇವೆ. ಎಷ್ಟು ಸೆನ್ಸರ್‌ಗಳನ್ನು ಕೊಟ್ಟಿದ್ದೇವೆ, ಅವುಗಳ ಪ್ರಯೋಜನವೇನು, ಪೂರೈಸಿದ ಕಂಪನಿ ಯಾವುದು ಎನ್ನುವುದನ್ನು ಇಸ್ರೊದ ಮಾಧ್ಯಮ ವಿಭಾಗದವರು ಪ್ರಕಟಿಸುತ್ತಾರೆ. ಇಸ್ರೊದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಾವು ಹೆಚ್ಚಿನ ಮಾಹಿತಿ ನೀಡುವುದಕ್ಕೆ ಬರುವುದಿಲ್ಲ’ ಎಂದು ಕಂಪನಿಯ ಮಾಲೀಕ ದೀಪಕ್ ದಡೋತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT