ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ಕನ್ನಡಿಗರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್

Last Updated 26 ಏಪ್ರಿಲ್ 2020, 14:03 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಭಾನುವಾರ ಕೋವಿಡ್ 19ಗೆ ಸಂಬಂಧಿಸಿದಂತೆ ಲಂಡನ್‌ನಲ್ಲಿ‌ ನೆಲೆಸಿರುವ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಮಾತನಾಡಿದರು.

ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲರ್ಮತ್ತು ಸೆಕ್ರೆಟರಿ ಆಫ್ಫಾರ್ ಜಸ್ಟೀಸ್, ಮೆಂಬರ್ ಆಫ್ಪಾರ್ಲಿಮೆಂಟ್ ರಾಬರ್ಟ್‌ ಬಕ್ಲಂಡ್. ಹಾಗು ಸುರೇಶ್ ಗತ್ತಾಪುರ, ಕೌನ್ಸಿಲರ್ ವೆಸ್ಟ್ ಸ್ವಿಂಡನ್ ಟ್ರಸ್ಟಿ ಆಫ್ಹಿಂದೂಟೆಂಪಲ್ ಹಾಗೂಶರವಣ ಗುರುಮೂರ್ತಿ ಸೇರಿದಂತೆ ಹಲವು ಯುಕೆ ಕನ್ನಡ ಬಳಗದ ಸದಸ್ಯರು ಭಾಗವಹಿಸಿದ್ದರು.

ಕನ್ನಡ ಬಳಗದ ಸದಸ್ಯರ ಜೊತೆಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು,ಲಂಡನ್ ಕಾನೂನು ಮಂತ್ರಿರಾಬರ್ಟ್ ಬಕ್ಲಂಡ್,ಕೊರೊನ ಹರಡುತ್ತಿರುವ ಬಗ್ಗೆ ಹಾಗೂಯಾವ ರೀತಿ ಅದನ್ನು ನಿಭಾಯಿಸುತ್ತಿದ್ದೇವೆ ಎನ್ನುವುದನ್ನುವಿವರಿಸಿದರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕೊರೊನ‌ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಮಾತನಾಡಿದ ಶರವಣ ಗುರುಮೂರ್ತಿ, ಲಂಡನ್‌‌ನಲ್ಲಿಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಸಾಲ ತೆಗೆದುಕೊಂಡು ‌ಇಲ್ಲಿಗೆ ಬಂದಿದ್ದು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದುಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದಮುಖ್ಯಮಂತ್ರಿ ಯಡಿಯೂರಪ್ಪ ಅವರುಬ್ಯಾಂಕ್ ಅಧಿಕಾರಿಗಳಜೊತೆ‌ ಮಾತನಾಡಿ ಇಎಂಐ ಕಟ್ಟಲು ಸಮಯಾವಕಾಶ ಕೊಡಿಸುವುದಾಗಿಭರವಸೆ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT