ಸೋಮವಾರ, ಏಪ್ರಿಲ್ 19, 2021
32 °C

ಪ್ರಕೃತಿ ರೆಸಾರ್ಟ್‌: ಕಾಂಗ್ರೆಸ್ ಶಾಸಕರೊಬ್ಬರು ನಾಪತ್ತೆ ವದಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲೇ ಕಾಂಗ್ರೆಸ್‌ ಶಾಸಕರು ತಂಗಿರುವ ಪ್ರಕೃತಿ ರೆಸಾರ್ಟ್‌ನಿಂದ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳು ಹರಡಿವೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಬುಧವಾರ ರಾತ್ರಿ ಹೊರ ಹೊಗಿದ್ದು ಅವರು ಮತ್ತೆ ರೆಸಾರ್ಟ್‌ಗೆ ವಾಪಾಸು ಆಗಿಲ್ಲ ಎನ್ನಲಾಗಿದೆ. ಶ್ರೀಮಂತ ಪಾಟೀಲ್‌ ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.

ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ಕೂಡ ಸದನಕ್ಕೆ ಗೈರಾಗುವ ಸಾಧ್ಯತೆಗಳಿವೆ.

ಇದರಿಂದ ಮೈತ್ರಿ ಸರ್ಕಾರದ ಬಲ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು