ಶುಕ್ರವಾರ, ಆಗಸ್ಟ್ 6, 2021
25 °C

ಕೋವಿಡ್‌: 4,135 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 213 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. 56 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಸೋಂಕಿತ 7,213 ಮಂದಿಯ ಪೈಕಿ 4,135 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 2,987 ಜನರಲ್ಲಿ ಮಾತ್ರ ಸೋಂಕು ಇದೆ. ಈವರೆಗೆ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಒಟ್ಟು 88ಕ್ಕೆ ಏರಿದೆ. 

ಧಾರವಾಡದಲ್ಲಿ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ವ್ಯಕ್ತಿ ಅದೇ ದಿನ ಮೃತಪಟ್ಟಿದ್ದಾರೆ. ಅವರು 6,222ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದರು. ಬೆಂಗಳೂರು ನಗರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಶೀತಜ್ವರ ಲಕ್ಷಣದೊಂದಿಗೆ (ಐಎಲ್‌ಐ) ಜೂನ್‌ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸೋಮವಾರ ಮೃತಪಟ್ಟರು.

ಹೊಸದಾಗಿ ಸೋಂಕಿತರಾದವರ ಪೈಕಿ 103 ಮಂದಿ ಅನ್ಯ ರಾಜ್ಯಗಳಿಂದ ಬಂದವರು ಹಾಗೂ 23 ಮಂದಿ ಹೊರ ದೇಶಗಳಿಂದ ಬಂದವರು. ಕಲಬುರ್ಗಿಯಲ್ಲಿ 48, ಬೆಂಗಳೂರಿನಲ್ಲಿ 35, ಧಾರವಾಡದಲ್ಲಿ 34, ದಕ್ಷಿಣ ಕನ್ನಡದಲ್ಲಿ 23, ರಾಯಚೂರಿನಲ್ಲಿ 18, ಯಾದಗಿರಿಯಲ್ಲಿ 13, ಬೀದರ್‌ನಲ್ಲಿ 11, ಬಳ್ಳಾರಿಯಲ್ಲಿ 10, ಕೊಪ್ಪಳದಲ್ಲಿ 4, ವಿಜಯಪುರ. ಶಿವಮೊಗ್ಗ, ಬಾಗಲಕೋಟೆಗಳಲ್ಲಿ ತಲಾ 3, ಉಡುಪಿ, ಹಾವೇರಿ, ರಾಮನಗರಗಳಲ್ಲಿ ತಲಾ 2 ಹಾಗೂ ಹಾಸನ, ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು