ಮಂಗಳವಾರ, ಸೆಪ್ಟೆಂಬರ್ 21, 2021
26 °C

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು 163ಕ್ಕೆ ಏರಿಕೆ: ಮೈಸೂರಿನಲ್ಲಿ 7 ಹೊಸ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಫ್ಲೂ ಕಾರ್ನರ್‌ ಮುಂದೆ ಪರಿಕ್ಷೇಗಾಗಿ ನಿಂತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಸಂಜೆ 5 ಗಂಟೆಯ ವರೆಗೂ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳು 163ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಒಟ್ಟು 4 ಮಂದಿ ಸಾವಿಗೀಡಾಗಿದ್ದು, 20 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಏಪ್ರಿಲ್‌ 5, ಭಾನುವಾರ ಸಂಜೆ 5 ರಿಂದ ಸೋಮವಾರ ಸಂಜೆಯ ವರೆಗೂ ಒಟ್ಟು 12 ಹೊಸ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಏಳು ಮಂದಿ ಮೈಸೂರಿನವರು, ಇಬ್ಬರು ಬಾಗಲಕೋಟೆ, ಬೆಂಗಳೂರು, ಕೇರಳ ಹಾಗೂ ಬೆಂಗಳೂರು ಗ್ರಾಮಾಂತರದ ತಲಾ ಒಬ್ಬರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿದೆ. 

ಇವರಲ್ಲಿ ಮೈಸೂರಿನ ಮೂವರು ಹಾಗೂ ಬೆಂಗಳೂರು ಗ್ರಾಮಾಂತರದ ಒಬ್ಬ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ. 

ಪ್ರಸ್ತುತ ಒಬ್ಬರು ಗರ್ಭಿಣಿ ಸೇರಿದಂತೆ 139 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಮೂವರಿಗೆ ಐಸಿಯುನಲ್ಲಿ ವೆಂಟಿಲೇಟರ್‌ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿದಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 163 ಪ್ರಕರಣಗಳ ಪೈಕಿ 9 ಮಂದಿ ಕೇರಳ ಮೂಲದವರಾಗಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರಲು ತೆರಳುವಾಗ ಪತ್ತೆ ಮಾಡಿ, ರಾಜ್ಯದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. 

ಭಾನುವಾರ ಕಾರವಾರ ಬಂದರಿನಲ್ಲಿ 22 ಜನರನ್ನು ತಪಾಸಣೆ ಒಳಪಡಿಸಲಾಗಿದೆ.

ಕರ್ನಾಟಕ–163
ಬೆಂಗಳೂರು59
ಮೈಸೂರು35
ಚಿಕ್ಕಬಳ್ಳಾಪುರ07
ದಕ್ಷಿಣ ಕನ್ನಡ12
ಕಲಬುರ್ಗಿ 05
ದಾವಣಗೆರೆ03
ಉಡುಪಿ03
ಬಳ್ಳಾರಿ06
ತುಮಕೂರು01
ಕೊಡಗು01
ಧಾರವಾಡ01
ಬೀದರ್‌10
ಬಾಗಲಕೋಟೆ03
ಬೆಳಗಾವಿ07
ಬೆಂಗಳೂರು ಗ್ರಾಮಾಂತರ02

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು