ಬುಧವಾರ, ಆಗಸ್ಟ್ 4, 2021
24 °C

ರಾಜ್ಯದಲ್ಲಿ ಇಂದು 378 ಕೋವಿಡ್‌ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 5213ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 378 ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ. 

ಉಡುಪಿಯಲ್ಲಿ ಇಂದು 121 ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲೂ 103 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಇಂದು 18 ಪ್ರಕರಣಗಳಷ್ಟೇ ಕಂಡು ಬಂದಿವೆ. 

ಗಂಭೀರವಾದ ವಿಚಾರವೆಂದರೆ, ಹಲವರ ಸೋಂಕಿನ ಮೂಲವನ್ನು ಅರೋಗ್ಯ ಇಲಾಖೆ ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ. ಇವರಿಗೆ ಸೋಂಕು ಹೇಗೆ ತಗುಲಿತು, ಇವರು ಯಾರ ಸಂಪರ್ಕಕ್ಕೆ ಬಂದಿದ್ದರು ಎಂಬುದರ ಮಾಹಿತಿ ಇಲಾಖೆಗೆ ಇನ್ನೂ ಸಿಕ್ಕಿಲ್ಲ. 

ಇನ್ನುಳಿದಂತೆ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರೇ ಹೆಚ್ಚಾಗಿದ್ದಾರೆ. 

ಇನ್ನು ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರೆಗೆ ಕೊರೊನಾ ವೈರಸ್‌ಗೆ ರಾಜ್ಯದಲ್ಲಿ 59 ಮಂದಿ ಪ್ರಾಣ ತೆತ್ತಂತಾಗಿದೆ. 

ಬೆಳಗಾವಿಯಲ್ಲಿ ಬಾಲಕಿ ಸೇರಿ ಐವರಿಗೆ ಸೋಂಕು; ಒಟ್ಟು ಸೋಂಕಿತರ ಸಂಖ್ಯೆ 257ಕ್ಕೆ ಏರಿಕೆ

ಬೆಳಗಾವಿ: ಎಂಟು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯ ಐದು ಜನರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಇದುವರೆಗೆ ಒಟ್ಟು ಸೋಂಕಿತರಾದವರ ಸಂಖ್ಯೆ 257ಕ್ಕೆ ತಲುಪಿದೆ. ಶನಿವಾರ ದೃಢಪಟ್ಟ ಐದು ಜನರಲ್ಲಿ ಇಬ್ಬರು ಗುಜರಾತ್‌ನಿಂದ ಹಾಗೂ ಮೂವರು ಮಹಾರಾಷ್ಟ್ರದಿಂದ ವಾಪಸ್ಸಾದವರು ಇದ್ದಾರೆ. ಎಂಟು ವರ್ಷದ ಬಾಲಕಿ ಹಾಗೂ ನಾಲ್ಕು ಜನ ಪುರುಷರು ಇದರಲ್ಲಿ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು