ಮಂಗಳವಾರ, ಫೆಬ್ರವರಿ 18, 2020
28 °C

ಪರಿಷತ್‌ ಚುನಾವಣೆ: ಯಾರಿಗೆ ಮಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಫೆ.17ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಯಾರಿಗೆ ಮಣೆ ಹಾಕಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ರಿಜ್ವಾನ್‌ ಅರ್ಷದ್ ಆಯ್ಕೆಯಾದ ಕಾರಣ ಈ ಸ್ಥಾನ ತೆರವಾಗಿದೆ. 2022ರ ಜೂನ್‌ 14ರ ವರೆಗೆ ಸದಸ್ಯತ್ವದ ಅವಧಿ ಇರಲಿದೆ. ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅವಕಾಶ ನೀಡುವ ಸಾಧ್ಯತೆ ಇದ್ದರೂ, ಈ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದು ಬಳಿಕ ಅನರ್ಹರಾದ ಆರ್.ಶಂಕರ್ ಅವರನ್ನೂ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

 ಚುನಾವಣೆ ವೇಳಾಪಟ್ಟಿ: ಜನವರಿ 30ರಂದು ಅಧಿಸೂಚನೆ ಹೊರಡಿಸಲಿದ್ದು, ಫೆ.6ರೊಳಗೆ ನಾಮಪತ್ರ ಸಲ್ಲಿಸಬೇಕು. 7ರಂದು ಪರಿಶೀಲನೆ ನಡೆಯಲಿದೆ. 10ರೊಳಗೆ ನಾಮಪತ್ರ ಹಿಂದೆಗೆದುಕೊಳ್ಳಬಹುದು. 17ರಂದು ಮತದಾನ ನಡೆಯಲಿದ್ದು, 5 ಗಂಟೆಯ ಬಳಿಕ ಎಣಿಕೆ ನಡೆಯಲಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು