ಶನಿವಾರ, ಜೂಲೈ 11, 2020
28 °C

ನಾಳೆ ನಡೆಯಲಿದೆ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ: ಸಚಿವ ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ಲಾಸ್ಮಾ ಥೆರಪಿಯನ್ನು ಮೊದಲ ರೋಗಿಗೆ ಮಾಡಲಿದ್ದೇವೆ. ಥೆರಪಿಗೆ ದಾನಿಯೂ ಸಿಕ್ಕಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ‌.ಸುಧಾಕರ್ ಹೇಳಿದರು.

'ರಾಜ್ಯದ ಮೊದಲ ಪ್ಲಾಸ್ಮಾ ಥೆರಪ ಇದಾಗಲಿದೆ' ಎಂದು ಅವರು ಶುಕ್ರವಾರ ಇಲ್ಲಿ ಕೇಂದ್ರದ ಆರೋಗ್ಯ ಸಚಿವರೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿದ ಸುದ್ದಿಗಾರರಿಗೆ ತಿಳಿಸಿದರು.

ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ ಕಳಂಕ ಎಂದು ತಿಳಿದುಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್. ಅದರಿಂದ ಸಹಜ ಜ್ವರ ಹೇಗೆ ಬರುತ್ತೋ ಇದೂ ಕೂಡಾ ಹಾಗೆ. ಶೇ.97 ಕೊರೊನಾ ಸೋಂಕಿತರು ವಾಸಿಯಾಗಿದ್ದಾರೆ ಎಂದು ಸುಧಾಕರ್‌ ಹೇಳಿದರು. 

'ರಾಜ್ಯದಲ್ಲಿ ಎರಡೂವರೆ ತಿಂಗಳಾದ್ರೂ 445 ಅಷ್ಟೇ ಪ್ರಕರಣಗಳ ವರದಿಯಾಗಿದೆ. ಈ ಪೈಕಿ‌ 200 ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು