ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧ ಹೋರಾಟ | ಕೊಡಗಿನ ವೈದ್ಯೆಗೂ ಅಮೆರಿಕದಲ್ಲಿ ವಿಶೇಷ ಗೌರವ

ಡಾ.ಕೀಕಣಮಾಡ ಪ್ರೀತಿ
Last Updated 24 ಏಪ್ರಿಲ್ 2020, 9:40 IST
ಅಕ್ಷರ ಗಾತ್ರ

ಮಡಿಕೇರಿ: ಕೋವಿಡ್‌ –19 ವಿರುದ್ಧ ಅಮೆರಿಕದಲ್ಲಿ ಹೋರಾಟ ನಡೆಸುತ್ತಿರುವ ಕೊಡಗಿನ ವೈದ್ಯೆ ಡಾ.ಕೀಕಣಮಾಡ ಪ್ರೀತಿ ಅವರಿಗೂ ಅಲ್ಲಿನ ನಾಗರಿಕರು ವಿಶೇಷ ಗೌರವ ಸಲ್ಲಿಸಿದ್ದಾರೆ.

ಮೈಸೂರಿನ ವೈದ್ಯೆ ಡಾ.ಉಮಾ ಮಧುಸೂದನ್‌ ಅವರಿಗೂ ಅಲ್ಲಿನ ನಿವಾಸಿಗಳು ಬೃಹತ್‌ ವಾಹನಗಳ ಪರೇಡ್‌ ನಡೆಸಿ, ವಿಶಿಷ್ಟ ಗೌರವ ನೀಡಿದ್ದರು. ಅದೇ ಬಡಾವಣೆಯಲ್ಲಿ ಪತಿ ಕೀಕಣಮಾಡ ಸುಬ್ರಮಣಿ ಅವರೊಂದಿಗೆ ನೆಲೆಸಿರುವ, ಡಾ.ಪ್ರೀತಿ ಅವರ ಕೋವಿಡ್‌ 19 ಹೋರಾಟ ಗುರುತಿಸಿ ಅಲ್ಲಿನ ನಾಗರಿಕರು ಗೌರವ ಸಲ್ಲಿಸಿದ್ದಾರೆ.

ಬೆಂಗಳೂರಿನ ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದ ಪ್ರೀತಿ, 1999ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಸೌತ್‌ ವಿಂಡ್ಸರ್‌ನಲ್ಲಿನ ಸೇಂಟ್‌ ಫ್ರಾನ್ಸಿಸ್‌ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಗುಣಮುಖರಾದವರು, ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಯೂ ವಾಹನಗಳಲ್ಲಿ ಸಾಗಿ ಸೈರನ್‌ ಮೊಳಗಿಸುತ್ತಾ ಸೇವೆಗೆ ಧನ್ಯವಾದ ಹೇಳಿದ್ದಾರೆ. ನಾಗರಿಕರ ಈ ವಿಶೇಷ ಗೌರವವನ್ನು ಅಷ್ಟೇ ನಮ್ರವಾಗಿ ಪ್ರೀತಿ ಸ್ವೀಕರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅದನ್ನು ಹಲವರು ಶೇರ್‌ ಮಾಡುತ್ತಿದ್ದಾರೆ.

ಕೊಡಗು ಜಿಲ್ಲೆಯಿಂದ ಮೊದಲಿಗರಾಗಿ ರಾಜ್ಯ ರಣಜಿ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದ ನೆಲಜಿ ಗ್ರಾಮದ ಮುಂಡಂಡ ರಾಜಪ್ಪ ಅವರ ಪುತ್ರಿ ಡಾ.ಪ್ರೀತಿ. ಪ್ರಸ್ತುತ ರಾಜಪ್ಪ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರೀತಿ ಅವರ ಪತಿ ಸುಬ್ರಮಣಿ ಸಹ ಕೊಡಗಿನ ಬಿರುನಾಣಿ ಗ್ರಾಮದವರು.

‘ಪುತ್ರಿಯ ವೈದ್ಯಕೀಯ ಸೇವೆಯ ಬಗ್ಗೆ ಹೆಮ್ಮೆಯಿದೆ. ಜತೆಗೆ, ಅಮೆರಿಕದಲ್ಲಿ ಕೋವಿಡ್‌ನ ಸಾವು– ನೋವಿನ ಬಗ್ಗೆಯೂ ಆತಂಕವಿದೆ’ ಎಂದು ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT