ಮೋಳೆ (ಬೆಳಗಾವಿ ಜಿಲ್ಲೆ): ಕಾಗವಾಡ–ನರವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸೋಮವಾರ ತಡರಾತ್ರಿ ದಾಖಲೆಗಳಿಲ್ಲದೆ ನಗದು ಸಾಗಿಸುತ್ತಿದ್ದ ಮೂವರನ್ನು ಕಾಗವಾಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹ 1,08 ಕೋಟಿ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.

ಅಭಯ್ ಸಿಂಗ್ ಗಾಯಕವಾಡ, ಆಶುತೋಷ್ ತಿಲಾರಿ ಹಾಗೂ ಅಕ್ಷಯ ದೇಸಾಯಿ ಬಂಧಿತರು. ಮಹಾರಾಷ್ಟ್ರದ ಕೊಲ್ಹಾಪುರದವರಾದ ಅವರು ಸದ್ಯ ಇಲ್ಲಿನ ಶಹಾಪುರದಲ್ಲಿ ಇದ್ದರು. ಮಹಾರಾಷ್ಟ್ರಕ್ಕೆ ಹೋಗುವಾಗ, ಅವರ ಕಾರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಅಥಣಿ ಸಿಪಿಐ ಶಂಕರಗೌಡ ಬಸಗೌಡರ ಹಾಗೂ ಕಾಗವಾಡ ಪಿಎಸ್ಐ ಹಣಮಂತ ಧರ್ಮಟ್ಟ ನೇತೃತ್ವದಲ್ಲಿ ದಾಳಿ ನಡೆದಿದೆ.

‘ಹಣ ಸಾಗಿಸುತ್ತಿದ್ದುದಕ್ಕೆ ಸೂಕ್ತ ದಾಖಲೆಗಳಿರಲಿಲ್ಲ. ಹೀಗಾಗಿ, ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.