ಬುಧವಾರ, ಫೆಬ್ರವರಿ 24, 2021
23 °C

ಸಚಿವರೂ ರಾಜೀನಾಮೆಗೆ ಸಿದ್ಧರಿದ್ದಾರೆ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಚಿವ ಸ್ಥಾನಕ್ಕಾಗಿ ಶಾಸಕರಲ್ಲಿ ಅತೃಪ್ತಿ ಇದ್ದರೆ, ಸ್ಥಾನ ಬಿಟ್ಟು ಕೊಡಲು ಕೆಲವು ಹಿರಿಯ ಸಚಿವರು ಸಹ ಸಿದ್ಧರಿದ್ದಾರೆ, ಹೈಕಮಾಂಡ್‌ನಿಂದ ಸೂಚನೆ ಬಂದರೆ ಮಾತ್ರ ಬದಲಾವಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಂಗಳವಾರ ಬೆಳಿಗ್ಗೆ ಮಾತನಾಡಿದರು.

ಆನಂದ್ ಸಿಂಗ್ ಮತ್ತು ರಮೇಶ್ ಅವರ ರಾಜೀನಾಮೆಗೆ ಸ್ಪಷ್ಟ ಕಾರಣ ನಮಗೆ ತಿಳಿದಿಲ್ಲ. ರಾಜೀನಾಮೆ ಕೊಟ್ಟಿರುವ ಇಬ್ಬರೂ ಬಿಜೆಪಿಯ ಸಂಪರ್ಕದಲ್ಲಿ ಇದ್ದರು. ಜಿಂದಾಲ್ ಕಂಪನಿಗೆ ಜಮೀನು ಕೊಡುವ ವಿಷಯದಲ್ಲಿ ಆನಂದ್ ಅವರಿಗೆ ಮನಸ್ತಾಪ ಇದ್ದರೆ ಸಂಪುಟ ಉಪ ಸಮಿತಿಯೊಂದಿಗೆ ಚರ್ಚಿಸಬೇಕಿತ್ತು. ಸಾಧಕ ಬಾಧಕಗಳ ಕುರಿತು ಆಲೋಚಿಸಬೇಕಿತ್ತು. ಆ ಜಮೀನನ್ನು ಕೊಡುವ ವಿಚಾರ ಯಾರ ಕಾಲದಲ್ಲಿ ಪ್ರಸ್ತಾಪವಾಯಿತು, ಯಾಕೆ ಆಯಿತು ಎಂಬ ಅಧ್ಯಯನವನ್ನು ಆನಂದ್ ಅವರು ಮಾಡಬೇಕಿತ್ತು ಎಂದು ಹೇಳಿದರು.

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಆ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸಮಯ ಬಂದಾಗ ಅವರನ್ನು ಬರಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಅಧಿಕಾರಕ್ಕಾಗಿ ಪ್ರತಿಯೊಬ್ಬರು ರಣನೀತಿ ರೂಪಿಸುತ್ತಾರೆ. ಈ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡ ಇದೆ. ಸಿ.ಎಂ. ವಿದೇಶಕ್ಕೆ ಹೋಗಿರುವಾಗಲೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಕಾಕತಾಳಿಯ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು