ಸೋಮವಾರ, ಜನವರಿ 20, 2020
26 °C
ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನವೊಲಿಸಿದ್ದ ಚೇತನ್

ಪ್ರತಿಭಟನೆ ತಣ್ಣಗಾಗಿಸಿದ ಡಿಸಿಪಿ ಚೇತನ್‌ಗೆ ಆರತಿ ಬೆಳಗಿದ ಸಿಎಎ ಬೆಂಬಲಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ಕಾವನ್ನು ವಿಶಿಷ್ಟ ರೀತಿಯಲ್ಲಿ ತಣ್ಣಗಾಗಿಸಿದ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಾಯ್ದೆ ಬೆಂಬಲಿಗರು ರಾಥೋಡ್ ಅವರನ್ನು ಭಾನುವಾರ ಆರತಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಿದ್ದಾರೆ.

ನಗರದೆಲ್ಲಡೆ ಮೂರು ದಿನಗಳ ಕಾಲ ಸೆಕ್ಷನ್‌ 144 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತಾದರೂ ಅದನ್ನು ಲೆಕ್ಕಿಸದೆ ಶುಕ್ರವಾರ ಕೆಲವು ಸಂಘಟನೆಗಳು ಟೌನ್‌ಹಾಲ್‌ ಬಳಿ ಸೇರಿ ಪ್ರತಿಭಟನೆ ನಡೆಸಿದ್ದವು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕುಳ್ಳಿರಿಸಿಕೊಂಡು ಮಾತನಾಡಿದ್ದ ಚೇತನ್‌, ‘ಹಿಂಸೆಯನ್ನು ಸೃಷ್ಟಿಸುವವರು ನಮ್ಮ–ನಿಮ್ಮ ನಡುವೆಯೇ ಇದ್ದಾರೆ. ಹಿಂಸೆ ನಮ್ಮ ಗುರಿಯಾಗಬಾರದು. ನಾನು ನಿಮ್ಮವನೇ ಎನಿಸಿದರೆ, ನನ್ಮ ಮೇಲೆ ಭರವಸೆ ಇದ್ದರೆ ನಾನು ಹೇಳುವ ಹಾಡಿಗೆ ಧ್ವನಿಗೂಡಿಸಿ’ ಎಂದು ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನವೊಲಿಸಿದ್ದರು. ಈ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇಂತಹ ಬಿಗಡಾಯಿಸಿದ ಪರಿಸ್ಥಿತಿಯಲ್ಲಿಯೂ ಜನರಿಗೆ ಅರಿವು ಮೂಡಿಸಿರುವ ಪ್ರಯತ್ನ ಅತ್ಯುತ್ತಮ ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸಹ ಟ್ವೀಟ್‌ ಮಾಡಿದ್ದರು.

ಇನ್ನಷ್ಟು...

ರಾಷ್ಟ್ರಭಕ್ತಿ ಪ್ರೇರೇಪಿಸಿ ಪ್ರತಿಭಟನೆ ಕಿಚ್ಚು ತಣ್ಣಗಾಗಿಸಿದ ಡಿಸಿಪಿ ಚೇತನ್‌

ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಲ ಪ್ರದರ್ಶನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು