ಶನಿವಾರ, ಜನವರಿ 18, 2020
20 °C
62 ಲಕ್ಷ ಮಕ್ಕಳನ್ನು ತಲುಪುವ ಗುರಿ

11ರಿಂದ 31ರವರೆಗೆ ಲಸಿಕೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೇ 11 ರಿಂದ 31ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿ ಯಾನದ ಮೂಲಕ 62 ಲಕ್ಷ ಮಕ್ಕಳನ್ನು ತಲುಪುವ ಗುರಿಯನ್ನು ಇಲಾಖೆ ಹೊಂದಿದೆ. 

‘16 ವರ್ಷದವರೆಗಿನ ಮಕ್ಕಳಿಗೆ ಮಾರಣಾಂತಿಕ ಕಾಯಿಲೆ ತಡೆಯಲು ವಿವಿಧ ಲಸಿಕೆಗಳನ್ನು ನೀಡಲಾಗುತ್ತದೆ. ಒಂದೂವರೆ ವರ್ಷದ ಬಳಿಕ 5ರಿಂದ 6 ವರ್ಷದವರೆಗೆ ಡಿಪಿಟಿ ವರ್ಧಕ ಲಸಿಕೆ ನೀಡಬೇಕಾಗುತ್ತದೆ. ಈ ಲಸಿಕೆಯನ್ನು ಕೆಲ ಪೋಷಕರು ಮರೆತು ಬಿಡುತ್ತಾರೆ. ಶಾಲೆಗಳಲ್ಲಿ 1ನೇ ತರಗತಿ, 5ನೇ ತರಗತಿ ಹಾಗೂ 10ನೇ ತರಗತಿ ಮಕ್ಕಳಿಗೆ ಲಸಿಕೆ ನೀಡಲಾಗುವುದು’ ಎಂದು ಇಲಾಖೆಯ ಲಸಿಕಾ ವಿಭಾಗದ ಉಪನಿರ್ದೇಶಕಿ ಡಾ.ಬಿ.ಎನ್. ರಜನಿ ತಿಳಿಸಿದರು. 

‘ರಾಜ್ಯದಲ್ಲಿ ಈವರೆಗೆ 583 ಅಧಿಕ ಡಿಫ್ತಿರಿಯಾ ಪ್ರಕರಣಗಳು ವರದಿ ಯಾಗಿದ್ದು, 28 ಮಂದಿ ಮರಣ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಆ ಭಾಗದ ಬಾಗಲಕೋಟೆ, ಬಳ್ಳಾರಿ, ಬೀದರ್, ಚಿತ್ರದುರ್ಗ, ಕೊಪ್ಪಳ, ವಿಜಯಪುರ, ಕಲಬುರ್ಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ 38 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ’ ಎಂದರು.

ಪ್ರತಿಕ್ರಿಯಿಸಿ (+)