ಗ್ರಾಮ ಪಂಚಾಯಿತಿ ಕೇಂದ್ರಕ್ಕಾಗಿ ಒತ್ತಾಯ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಶುಕ್ರವಾರ, ಮೇ 24, 2019
23 °C

ಗ್ರಾಮ ಪಂಚಾಯಿತಿ ಕೇಂದ್ರಕ್ಕಾಗಿ ಒತ್ತಾಯ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

Published:
Updated:

ಕಲಬುರ್ಗಿ: ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದವರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮವನ್ನು ಗ್ರಾಮ ಪಂಚಾಯಿತಿ ಕೇಂದ್ರವನ್ನಾಗಿಸುವಂತೆ 2ವರ್ಷದಿಂದ ಒತ್ತಾಯಿಸುತ್ತಿದ್ದ ಗ್ರಾಮಸ್ಥರು ಇಂದು(ಏ.23) ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ 1339 ಮತದಾರರು ಇದ್ದು, ಇವರಲ್ಲಿ 698 ಪುರುಷ ಮತ್ತು 641 ಮಹಿಳಾ ಮತದಾರರು ಇದ್ದಾರೆ. ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆಯಲ್ಲಿ ಮೊದಲು ಈ ಗ್ರಾಮದ ಹೆಸರು ಇತ್ತು. ಜಿಲ್ಲಾಧಿಕಾರಿಗಳು ದೇಗಾಂವ ಪಂಚಾಯಿತಿ ಘೋಷಣೆ ಮಾಡಿದ್ದರು. ಆದರೆ ನಂತರ ಗ್ರಾಮಪಂಚಾಯಿತಿ ಕೇಂದ್ರ ರದ್ದುಗೊಂಡು ಸಮೀಪದ ಹಾಳ ತಡಕಲ ಗ್ರಾಮಕ್ಕೆ ಗ್ರಾ.ಪಂ ಕೇಂದ್ರ ನೀಡಲಾಗಿದೆ.

ಜನಸಂಖ್ಯೆ ಹೆಚ್ಚು, ಮೂಲಭೂತ ಸೌಲಭ್ಯ ಹೊಂದಿರುವ ಈ ಗ್ರಾಮಕ್ಕೆ ಪಂಚಾಯಿತಿ ಕೇಂದ್ರ ನೀಡದ ಕಾರಣ ಜನರು ಇಂದು ಲೋಕಸಭೆ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ತಹಶೀಲ್ದಾರ್ ಎಂ.ಎನ್.ಚೋರಗಸ್ತಿ ಗ್ರಾಮಸ್ಥರೊಂದಿಗೆ ಸಂಧಾನ ನಡೆಸಿದರೂ ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !