ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಿಗೂ ಕನಿಷ್ಠ ಗಾತ್ರ ನಿಗದಿ

ಮತ್ಸ್ಯ ಸಂಪತ್ತು ರಕ್ಷಣೆಗೆ ವಿಶಿಷ್ಟ ಹೆಜ್ಜೆ
Last Updated 10 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮಂಗಳೂರು: ಮತ್ಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಮೀನುಗಾರಿಕಾ ಇಲಾಖೆಯು ಮೀನುಗಾರಿಕೆಯಲ್ಲಿ ಹಿಡಿಯಬಹುದಾದ ಮೀನಿನ ಗಾತ್ರವನ್ನು ನಿಗದಿಪಡಿಸಿದೆ. ನಿಗದಿತ ಗಾತ್ರಕ್ಕಿಂತ ಸಣ್ಣ ಮೀನನ್ನು ಹಿಡಿದರೆ, ಕಾನೂನು ಮೂಲಕ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನುಗಳನ್ನು ಫಿಶ್‌ಮೀಲ್ ಪ್ಲಾಂಟ್, ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಈ ಸಣ್ಣ ಮೀನುಗಳನ್ನು ಹಿಡಿಯುವುದರಿಂದ, ಮುಂದೆ ಮೀನಿನ ಸಂಪತ್ತು ವೃದ್ಧಿಗೆ ತೊಂದರೆಯಾಗಬಹುದು. ಮೀನಿನ ಉತ್ಪಾದನೆಯು ಸಹ ಕಡಿಮೆಯಾಗುವುದು. ಈ ಹಿನ್ನೆಲೆಯಲ್ಲಿ ಪ್ರಭೇದಕ್ಕೆ ಅನುಗುಣವಾಗಿ ಗಾತ್ರವನ್ನು ನಿಗದಿ ಮಾಡಿದ್ದಾರೆ.

ನಿಗದಿಗೊಳಿಸಲಾದ ಮೀನಿನ ಕನಿಷ್ಠ ಕಾನೂನಾತ್ಮಕ ಗಾತ್ರದ ವಿವರ : ಬೂತಾಯಿ-10 ಸೆಂ.ಮೀ., ಬಂಗುಡೆ-14 ಸೆಂ.ಮೀ., ಪಾಂಬೊಲ್-46 ಸೆಂ.ಮೀ., ಅಂಜಲ್-50 ಸೆಂ.ಮೀ., ಕೊಲ್ಲತರು-7 ಸೆಂ.ಮೀ., ಕಪ್ಪು ಮಾಂಜಿ-17 ಸೆಂ.ಮೀ., ಕೇದಾರ್-31 ಸೆಂ.ಮೀ., ಕಾಣೆ-11.3 ಸೆಂ.ಮೀ., ಬೊಳೆಂಜಿರ್-8.9 ಸೆಂ.ಮೀ., ಮದ್ಮಲ್-12 ಸೆಂ.ಮೀ., ಡಿಸ್ಕೊ-17 ಸೆಂ.ಮೀ., ಅಡೆ ಮೀನು-10 ಸೆಂ.ಮೀ., ನಂಗು-9 ಸೆಂ.ಮೀ., ಬಿಳಿ ಮಾಂಜಿ-13 ಸೆಂ.ಮೀ., ಮುರು ಮೀನು-18 ಸೆಂ.ಮೀ., ಕಲ್ಲೂರು-15 ಸೆಂ.ಮೀ., ಕೊಡ್ಡಾಯಿ-17 ಸೆಂ.ಮೀ., ಕೋಲುಬಂಡಾಸ್-ಸೆಂ.ಮೀ., ಡಿಎಂಎಲ್, ಕಪ್ಪೆ ಬಂಡಾಸ್-11 ಸೆಂ.ಮೀ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT