ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಯಾತ್ರಿಕರ ಮೇಲೆ ಆನೆ ದಾಳಿ

7

ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಯಾತ್ರಿಕರ ಮೇಲೆ ಆನೆ ದಾಳಿ

Published:
Updated:

ಮಂಗಳೂರು: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕೈಕಂಬ ಬಳಿ ಕಾಡಾನೆ ದಾಳಿ ನಡೆಸಿದೆ. 

ಆನೆ ದಾಳಿಗೆ ಸಿಲುಕಿ ಆರು ಮಂದಿ ಯಾತ್ರಿಕರು ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಮಾರುತಿ ಆಮ್ನಿ ವ್ಯಾನ್‌ ಸಂಪೂರ್ಣ ಜಖಂಗೊಂಡಿದೆ. 

ಶನಿವಾರ ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಹಿಂಬದಿ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕ ಜೋರಾಗಿ ಹಾರನ್ ಮಾಡಿದ್ದರಂತೆ ಆನೆ ಕಾಡಿನತ್ತ ನುಗ್ಗಿದೆ.

ಕಾರಿನಲ್ಲಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು. ಯಾತ್ರಿಕರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನವರಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

  • 9

    Happy
  • 1

    Amused
  • 2

    Sad
  • 1

    Frustrated
  • 1

    Angry

Comments:

0 comments

Write the first review for this !