ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ಲೀಟರ್ ಸ್ಯಾನಿಟೈಸರ್: ಭರವಸೆ

ಕೋವಿಡ್–19 ನಿಯಂತ್ರಣಕ್ಕೆ ಸಹಕಾರ: ಉಚಿತ ಪೂರೈಕೆ
Last Updated 29 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯಾಂಡ್ ಸ್ಯಾನಿಟೈಸರ್( ಕೈ ಶುದ್ಧೀಕರಿಸುವ ದ್ರಾವಣ) ಕೊರತೆ ನೀಗಿಸುವ ಮೂಲಕ ಸರ್ಕಾರಕ್ಕೆ ನೆರವಾಗಲು ಡಿಸ್ಟಲರಿ ಕಂಪನಿಗಳು ಮುಂದೆ ಬಂದಿದ್ದು, 25 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿಕೊಡುವ ಅಭಯ ನೀಡಿವೆ.

ಕೋವಿಡ್ –19 ಹರಡುತ್ತಿರುವ ಕಾರಣ ಹ್ಯಾಂಡ್ ಸ್ಯಾನಿಟೈಸರ್‌ಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಸದ್ಯ ಮದ್ಯ ತಯಾರಿಕೆ ನಿಲ್ಲಿಸಿರುವ ಡಿಸ್ಟಿಲರಿಗಳು, ಸಾರ್ವಜನಿಕರ ಹಿತ ದೃಷ್ಟಿಯಿಂದ ಮತ್ತು ಸರ್ಕಾರಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ತಯಾರಿಸುವ ಕಾರ್ಯವನ್ನೂ ಕಂಪನಿಗಳು ಆರಂಭಿಸಿವೆ.

ಯುನೈಟೆಡ್ ಅಲ್ಕೋಬ್ಲೆಂಡ್ಸ್‌, ಅಮೃತ ಡಿಸ್ಟಿಲರಿ, ವರಿಯನ್ ಡಿಸ್ಟಿಲರಿ, ಖೋಡೇಸ್‌ ಡಿಸ್ಟಿಲರಿ, ಶಶಿ ಡಿಸ್ಟಿಲರಿ, ಯುನಿಸ್ಟಿಲ್ ಆಲ್ಕೊಬ್ಲೆಂಡ್ಸ್, ಎನ್‌ಎಸ್‌ಎಲ್ ಶುಗರ್ಸ್‌ ಲಿಮಿಟೆಡ್‌, ಚಾಮುಂಡೇಶ್ವರಿ, ಬಕಾರ್ಡಿ,ರಾಡಿಕೊ ಖೈತಾನ್, ಕಲ್ಪತರು, ಜೆ.ಪಿ. ಡಿಸ್ಟಿಲರಿ, ಸರ್ವದಾ, ಇಐಡಿ ಪ್ಯಾರಿ ಡಿಸ್ಟಿಲರಿ, ಶಾಮನೂರು ಶುಗರ್ಸ್, ಇಂಡಿಯನ್ ಕೇನ್ ಪವರ್ ಡಿಸ್ಟಿಲರಿ, ವಿಜಯನಗರ ಶುಗರ್ಸ್, ನಂದಿ ಎಸ್‌ಎಸ್‌ಕೆ ಡಿಸ್ಟಿಲರಿ, ನಿರಾಣಿ ಶುಗರ್ಸ್, ರೇಣುಕಾ ಡಿಸ್ಟಿಲರಿ ಸೇರಿ ಎಲ್ಲಾ ಜಿಲ್ಲೆಯ 48 ಡಿಸ್ಟಿಲರಿಗಳಲ್ಲಿ ಸ್ಯಾನಿಟೈಸರ್ ತಯಾರಿಸಲಾಗುತ್ತಿದೆ.

*
ಒಟ್ಟು 25 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿಕೊಡಲು ಒಪ್ಪಿಕೊಂಡಿದ್ದೇವೆ. ಅಬಕಾರಿ ಇಲಾಖೆ ಮೂಲಕ ಆಯಾ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುತ್ತಿದೆ
-ಅರುಣ್‌ಕುಮಾರ್ ಪಾರಸ್, ಕರ್ನಾಟಕ ಬ್ರೇವರಿಸ್ ಆ್ಯಂಡ್ ಡಿಸ್ಟಿಲರೀಸ್ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT