ಭಾನುವಾರ, ಸೆಪ್ಟೆಂಬರ್ 22, 2019
25 °C

ಡಿಕೆಶಿ ಬಂಧನ: ಮಾಧ್ಯಮದವರಿಗೆ ಕೈಮುಗಿದ ಡಿಸಿಎಂ ಕಾರಜೋಳ!

Published:
Updated:

ಬಾಗಲಕೋಟೆ: ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗುರುವಾರ ಇಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ಡಿ.ಕೆ.ಶಿವಕುಮಾರ್ ಬಂಧನ ವಿಚಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮದವರಿಗೆ ಕೈಮುಗಿದ ಕಾರಜೋಳ, 'ನಾನು ಹೇಳೋದೆ ಬೇರೆ ನೀವೂ ಬಿಂಬಿಸೋದು ಬೇರೆ ಆಗುತ್ತೆ... ಅದನ್ನು ಕೇಳಿಬೇಡಿ.. ನಾನು ಸಹಜವಾಗಿ ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕೆಲವು ಶಬ್ದ ಬಳಸುತ್ತೇನೆ. ಅದನ್ನು ನೀವು (ಮಾಧ್ಯಮದವರು) ಕನಕಪುರ ಬಂಡೆಗೆ ಕಾರಜೋಳ ಡಿಚ್ಚಿ ಹೊಡೆದ್ರು ಅಂದ್ರೆ ನನ್ನ ಗತಿಯೇನು..!?' ಎಂದು ಪ್ರಶ್ನಿಸಿದರು.

ಅಂತಹ ವಿವಾದವಾಗುವ ವಿಚಾರವನ್ನು ಕೇಳಬೇಡಿ ಎಂದು ಕೈ ಮುಗಿದರು.

ಇದನ್ನೂ ಓದಿ... ಡಿಕೆಶಿ ಬಂಧನ: ರಾಮನಗರ ಜಿಲ್ಲೆಯಾದ್ಯಂತ ಬಂದ್ ಆರಂಭ

ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಲಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ‘ಅದು ಸ್ವಾಭಾವಿಕ ಅವರು (ಕಾಂಗ್ರೆಸ್‌ನವರು) ಖಾಲಿ ಇದ್ದಾರೆ. ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರೋದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಪೂರ್ಣಾವಧಿ ಮುಗಿಸಲಿದೆ ಎಂದರು.

ಇದನ್ನೂ ಓದಿ... 13ರವರೆಗೆ ಡಿ.ಕೆ ಶಿವಕುಮಾರ್‌ ಇ.ಡಿ ವಶಕ್ಕೆ

Post Comments (+)