ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ (89) ಅವರು ಮಂಗಳವಾರ ನಿಧನರಾದರು.

ಅವರಿಗೆ ಪತಿ ದೊರೆಸ್ವಾಮಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ಪಾರ್ಥಿವ ಶರೀರವನ್ನು ಜಯನಗರದ 4ನೇ ಟಿ ಬ್ಲಾಕ್ನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ, ಶರೀರವನ್ನು ಕಿಮ್ಸ್ ಆಸ್ಪತ್ರೆಗೆ ದಾನ ಮಾಡಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ದೊರೆಸ್ವಾಮಿ ಅವರು ತಮ್ಮ 31ನೇ ವಯಸ್ಸಿನಲ್ಲಿ (1950ರ ಡಿಸೆಂಬರ್ನಲ್ಲಿ ) ಲಲಿತಮ್ಮ ಅವರನ್ನು ಮದುವೆ ಆಗಿದ್ದರು.

‘ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಸ್ನೇಹಿತರ ಜೊತೆ ಪಗಡೆ ಆಟವಾಡಲು ಹೋಗಿದ್ದೆ. ಅದೇ ಸಂದರ್ಭದಲ್ಲಿ ಲಲಿತಮ್ಮಳನ್ನು ನೋಡಿದ್ದೆ. ಆಟದಲ್ಲಿ ಸೋತು ವಾಪಸ್ ಬರುವಾಗಲೇ ಆಕೆಯ ತಂದೆ–ತಾಯಿ ಮಗಳನ್ನು ಮದುವೆಯಾಗುವಂತೆ ಕೇಳಿದ್ದರು. ನನ್ನ ತಾಯಿಯ ಒಪ್ಪಿಗೆ ಪಡೆದು ಆಕೆಯನ್ನು ಮದುವೆಯಾದೆ. ಯಾವುದೇ ಜಾತಕ, ಕುಲ– ಗೋತ್ರ ನೋಡಿರಲಿಲ್ಲ’ ಎಂದು ದೊರೆಸ್ವಾಮಿ ನೆನಪು ಮಾಡಿಕೊಂಡರು.

‘ನಮ್ಮಿಬ್ಬರ ಮದುವೆಯಾಗಿ ಈ ಡಿಸೆಂಬರ್ಗೆ 69 ವರ್ಷ ತುಂಬಿ 70ನೇ ವರ್ಷ ಶುರುವಾಗುತ್ತಿತ್ತು. ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಯ ಇಚ್ಛೆಯಂತೆ ದೇಹದಾನ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.