ತೋಟಗಳಿಗೆ ಬೀಳುತ್ತಿವೆ ಕೊಡಲಿ ಪೆಟ್ಟು

ಮಂಗಳವಾರ, ಜೂನ್ 18, 2019
26 °C
ಚಿತ್ರದುರ್ಗ ಜಿಲ್ಲೆಯಲ್ಲಿ ನೀರಿಲ್ಲದೇ ಒಣಗಿದ ಅಡಿಕೆ ತೋಟ

ತೋಟಗಳಿಗೆ ಬೀಳುತ್ತಿವೆ ಕೊಡಲಿ ಪೆಟ್ಟು

Published:
Updated:
Prajavani

ಚಿತ್ರದುರ್ಗ: ಭೀಕರ ಬರ ಪರಿಸ್ಥಿತಿಯಿಂದ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಅಡಿಕೆ ತೋಟಗಳು ಒಣ
ಗುತ್ತಿವೆ. ತೋಟ ಉಳಿಸಿಕೊಳ್ಳಲು ಶ್ರಮಿಸಿ ಕೈಚೆಲ್ಲಿದ ರೈತರು ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತ ಕಣ್ಣೀರು ಸುರಿಸುತ್ತಿದ್ದಾರೆ.

ಅಂತರ್ಜಲ ಮಟ್ಟ ಕುಸಿದ ಪರಿಣಾಮ ಚಿತ್ರದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲ್ಲೂಕಿನ ಅಡಿಕೆ ತೋಟ
ಗಳಿಗೆ ಸಂಕಷ್ಟ ಎದುರಾಗಿದೆ. ಟ್ಯಾಂಕರ್‌ ನೀರು ಹರಿಸಿದರೂ ತೋಟ ರಕ್ಷಿಸಿಕೊಳ್ಳಲು ಆಗದೇ ಅನೇಕರು ಪರದಾಡುತ್ತಿದ್ದಾರೆ. ಇಂತಹ ರೈತರ ಕರುಣಾಜನಕ ಕಥೆಗಳು ಪ್ರತಿ ಹಳ್ಳಿಯಲ್ಲೂ ಸಿಗುತ್ತಿವೆ.

ಚಿತ್ರದುರ್ಗ ತಾಲ್ಲೂಕಿನ ಈರಜ್ಜನಹಟ್ಟಿಯ ರೈತ ನಾಗರಾಜ 25 ವರ್ಷದ ತೋಟವನ್ನು ಕಡಿದು ಹಾಕಿದ್ದಾರೆ. ಸುಮಾರು ನಾಲ್ಕು ಎಕರೆ ಜಮೀನಿನಲ್ಲಿದ್ದ ಎರಡು ಸಾವಿರಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕುರುಳಿವೆ. ನಿತ್ಯ ಬೆಳಿಗ್ಗೆ ಜಮೀನಿಗೆ ಬರುವ ಇವರು ಸರ್ವನಾಶವಾದ ಅಡಿಕೆ ತೋಟವನ್ನು ತದೇಕಚಿತ್ತದಿಂದ ನೋಡುತ್ತ ಸಂಕಟಪಡುತ್ತಿದ್ದಾರೆ.

ಚಿತ್ರಹಳ್ಳಿಯ ನಾಗರಾಜ ಅವರು ದಶಕದ ಹಿಂದೆ ಹಿರಿಜನಹಟ್ಟಿಯ ಸಮೀಪ ಬಂದು ತೋಟ ಬೆಳೆಸಿದ್ದರು. ಪ್ರತಿ
ವರ್ಷ ಹತ್ತಾರು ಲಕ್ಷ ಆದಾಯವೂ ಬರುತ್ತಿತ್ತು. ಐದು ವರ್ಷಗಳಿಂದ ಸತತವಾಗಿ ತಲೆದೋರಿದ ಬರ ಪರಿಸ್ಥಿತಿಗೆ ಕಂಗೆಟ್ಟು ಹೋಗಿದ್ದಾರೆ.

‘ಕಳೆದ ವರ್ಷ ಬಿದ್ದ ಮಳೆಗೆ ಅಡಿಕೆ ಮರಗಳ ಬುಡ ಕೂಡ ಒದ್ದೆಯಾಗಲಿಲ್ಲ. ತೋಟದಲ್ಲಿದ್ದ ಏಳು ಕೊಳವೆಬಾವಿಗಳು ಒಂದರ ಮೇಲೊಂದು ಕೈಕೊಟ್ಟವು. ಟ್ಯಾಂಕರ್‌ ಮೂಲಕ ನೀರು ಹರಿಸಿ ತೋಟ ಉಳಿಸಿಕೊಳ್ಳಲು ₹3 ಲಕ್ಷ ಖರ್ಚು ಮಾಡಿದೆ. ಕೊನೆಗೂ ಸೋತು ಹೋದೆ’ ಎಂದು ರೈತ ನಾಗರಾಜ ಹೇಳಿದರು.

ಪಕ್ಕದ ಜಾನಕೊಂಡ ಗ್ರಾಮದಲ್ಲಿ ರಾಜಣ್ಣ ಎಂಬುವರ ತೋಟ ಸಂಪೂರ್ಣ ಒಣಗಿದೆ. ಐದು ಕೊಳವೆಬಾವಿ ಬತ್ತಿವೆ. ಟ್ಯಾಂಕರ್‌ ನೀರು ಹರಿಸಿ ತೋಟ ಉಳಿಸಿಕೊಳ್ಳುವ ಪ್ರಯತ್ನ ಫಲ ನೀಡಲಿಲ್ಲ. ಅಡಿಕೆ ಜತೆಗೆ ತೆಂಗಿನ ಮರಗಳು ನೆಲಕ್ಕುರುಳುತ್ತಿವೆ. ವಿಶ್ವೇಶ್ವರ ಎಂಬುವರ
ನಾಲ್ಕು ಎಕರೆ ತೋಟದಲ್ಲಿದ್ದ 1,800 ಅಡಿಕೆ ಮರಗಳು ಒಂದೊಂದಾಗಿ ಉರುಳುತ್ತಿವೆ. 20 ವರ್ಷಗಳಿಂದ ಫಲ ನೀಡುತ್ತಿದ್ದ ತೋಟ ಬರಡಾಗಿರುವುದನ್ನು ಕಂಡು ವ್ಯಥೆ ಪಡುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !