ರಾಜೀನಾಮೆ ನೀಡಿದ ಅತೃಪ್ತ ಶಾಸಕರನ್ನು ಕರೆದೊಯ್ಯಲು ಜ್ಯೂಪಿಟರ್ ವಿಮಾನ ಬಳಕೆ
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮತ್ತು ಜೆಡಿಎಸ್ನ 10 ಅತೃಪ್ತ ಶಾಸಕರನ್ನು ಮುಂಬೈಗೆ ಕರೆದೊಯ್ಯಲು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕಂಪನಿಗೆ ಸೇರಿದ ವಿಶೇಷ ವಿಮಾನ ಬಳಸಲಾಗಿದೆ.
ವಿಶೇಷ ವಿಮಾನವು ಜ್ಯೂಪಿಟರ್ ಕ್ಯಾಪಿಟಲ್ ಲಿಮಿಟೆಡ್ಗೆ ಸೇರಿದ್ದು, ರಾಜೀವ್ ಚಂದ್ರಶೇಖರ್ ಅವರು ಈ ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಯೂಪಿಟರ್ ಕ್ಯಾಪಿಟಲ್ ಅಧಿಕಾರಿಗಳು, ‘ನಮ್ಮ ಕಂಪನಿ ವ್ಯವಹಾರ ನಡೆಸುತ್ತಿದ್ದು, ಚಾರ್ಟೆಡ್ ವಿಮಾನದ ಸೇವೆಯನ್ನೂ ನೀಡುತ್ತಿದ್ದೇವೆ. ಯಾರು ಬೇಕಾದರೂ ಸೇವೆಯನ್ನು ಬಳಸಿಕೊಳ್ಳಬಹುದು’ ಎಂದರು. ಯಾರ ಹೆಸರಿನಲ್ಲಿ ವಿಮಾನವನ್ನು ಬುಕ್ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.