ಬುಧವಾರ, ನವೆಂಬರ್ 20, 2019
22 °C

ಜಿ.ಪರಮೇಶ್ವರ ವಿಚಾರಣೆ

Published:
Updated:

ಬೆಂಗಳೂರು: ಕಾಂಗ್ರೆಸ್‌ ಶಾಸಕ ಜಿ. ಪರಮೇಶ್ವರ ಅವರು ಐ.ಟಿ. ಅಧಿಕಾರಿಗಳ ಎದುರು ಸೋಮವಾರ ವಿಚಾರಣೆಗೆ ಹಾಜರಾದರು.

ಮೂರು ತಾಸು ನಡೆದ ವಿಚಾರಣೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪರಮೇಶ್ವರ, ‘ಇತ್ತೀಚೆಗೆ ಅಧಿಕಾರಿಗಳು ನನ್ನ ಮನೆ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ನನ್ನ ಕಾಲೇಜು ಬಗ್ಗೆ ದಾಖಲೆಗಳನ್ನು ಕೇಳಿದ್ದರು. ಸಂಬಂಧಿಸಿದ ದಾಖಲೆಗಳನ್ನು ನೀಡಲು ಬಂದಿದ್ದೆ. ವಿಚಾರಣೆ ವೇಳೆ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ವಿಚಾರಣೆಗೆ ಬರಬೇಕೆಂದು ಸೂಚಿಸಿಲ್ಲ’ ಎಂದರು.

ಪರಮೇಶ್ವರ ಅವರ ಮನೆ, ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐ.ಟಿ ಅಧಿಕಾರಿಗಳು ಅ.10ರಂದು ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದ ಅಧಿಕಾರಿಗಳು, ಪರಮೇಶ್ವರ ಅವರ ವಿಚಾರಣೆಯನ್ನೂ ನಡೆಸಿದ್ದರು.

ಪ್ರತಿಕ್ರಿಯಿಸಿ (+)