ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀನು ಸುರಿದ ಗೋವಾ ಅಧಿಕಾರಿಗಳು

ಷರತ್ತುಗಳನ್ನು ಪಾಲಿಸಿದರೂ ತಪ್ಪದ ಕಿರುಕುಳ: ಆರೋಪ
Last Updated 12 ಡಿಸೆಂಬರ್ 2018, 19:05 IST
ಅಕ್ಷರ ಗಾತ್ರ

ಕಾರವಾರ: ಗೋವಾದ ಷರತ್ತುಗಳನ್ನು ಪಾಲಿಸಿರಾಜ್ಯದಿಂದ ಮೀನುಗಳನ್ನುಸಾಗಿಸಿದ ಲಾರಿಯನ್ನೂಗಡಿಭಾಗ ಪೋಳೆಂ ಚೆಕ್‌ಪೋಸ್ಟ್‌ನಲ್ಲಿ ತಡೆಯಲಾಗಿದೆ. ಅಲ್ಲದೇ ಆ ಮೀನನ್ನುಗೋವಾದಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (ಎಫ್‌ಡಿಎ) ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿದಿದ್ದಾರೆ. ಈ ಮೂಲಕ ರಾಜ್ಯದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಜಿಲ್ಲಾ ಮೀನು ಮಾರಾಟಗಾರರ ಸಂಘದ ಕಾರ್ಯದರ್ಶಿ ಪ್ರವೀಣ ಜಾವಕರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ರೋಹಿದಾಸ್ ತಾಂಡೇಲ್ ಎನ್ನುವವರು ಸುಮಾರು₹ 10 ಲಕ್ಷ ಮೌಲ್ಯದ ಇಶ್ವಾಣ್ (ಕಿಂಗ್ ಫಿಶ್) ಮೀನನ್ನು ಗೋವಾಕ್ಕೆಕಳುಹಿಸಿದ್ದರು. ಲಾರಿಯಚಾಲಕ ರಾಮಣ್ಣ ಎನ್ನುವವರು ಇನ್ಸುಲೇಟೆಡ್ (ಸಂಪೂರ್ಣ ಮುಚ್ಚಿದ) ಲಾರಿಯ ಮೂಲಕ ಶನಿವಾರ ಗೋವಾಕ್ಕೆ ಕೊಂಡೊಯ್ದಿದ್ದರು. ಈ ವೇಳೆ ಗೋವಾ ಗಡಿ ಪೋಳೆಂನಲ್ಲಿ ಲಾರಿಯನ್ನುಅಲ್ಲಿನಅಧಿಕಾರಿಗಳು ತಡೆದರು’ ಎಂದು ವಿವರಿಸಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆಸೆದರು:‘ನಿಮ್ಮಲಾರಿಯಲ್ಲಿರುವಮೀನಿನಲ್ಲಿ ಫಾರ್ಮಲಿನ್ ಅಂಶ ಇದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಪರಿಶೀಲನೆ ಮಾಡಬೇಕು ಎಂದು ಪಣಜಿಯ ಎಫ್‌ಡಿಎ ಕಚೇರಿಗೆ ಲಾರಿಯನ್ನು ತೆಗೆದುಕೊಂಡು ಹೋದರು. ನಂತರ ಭಾನುವಾರ ಒಂದು ದಿನ ಪೂರ್ತಿ ಲಾರಿಯನ್ನು ಅಲ್ಲೇ ಇರಿಸಿಕೊಂಡರು. ಮೀನಿನಲ್ಲಿ ಫಾರ್ಮಲಿನ್ ಅಂಶ ಇಲ್ಲ ಎಂದುಸೋಮವಾರ ತಿಳಿಸಿದರು. ಆದರೆ, ಮೀನುಗಳನ್ನು ಎಲ್ಲಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿಲ್ಲ. ಹೀಗಾಗಿ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ಆದೇಶದಂತೆ ಲಾರಿಯಲ್ಲಿರುವ ಮೀನನ್ನು ತ್ಯಾಜ್ಯಕ್ಕೆ ಎಸೆಯಲಾಗುವುದು ಎಂದು ಹೇಳಿದರು. ಈ ವೇಳೆ ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಬಿಡಲಿಲ್ಲ. ಕೊನೆಗೂ ಮೀನುಗಳನ್ನು ತ್ಯಾಜ್ಯ ಘಟಕಕ್ಕೆ ಸುರಿದರು’ ಎಂದು ದೂರಿದರು.

ಈ ಕುರಿತು ಲಾರಿ ಚಾಲಕ ರಾಮಣ್ಣ ಮಾತನಾಡಿ, ‘ನಾವು ಗೋವಾ ರಾಜ್ಯದ ಷರತ್ತುಗಳನ್ನು ಪಾಲಿಸಿದ್ದೆವು. ಇನ್ಸುಲೇಟೆಡ್ಲಾರಿಯಲ್ಲೇಮೀನನ್ನು ಕೊಂಡೊಯ್ದಿದ್ದೆವು. ಜತೆಗೆ, ನಮ್ಮ ಬಳಿ ಎಫ್‌ಡಿಎ ಪರವಾನಗಿ ಕೂಡ ಇತ್ತು. ಆದರೂ ಅಲ್ಲಿನ ಅಧಿಕಾರಿಗಳು ನಮ್ಮ ಬಳಿ ದುರ್ವರ್ತನೆ ತೋರಿದರು’ಎಂದು ಆರೋಪಿಸಿದರು.

‘ಮೀನುಗಳನ್ನು ತ್ಯಾಜ್ಯಕ್ಕೆ ಎಸೆಯದಂತೆ ಕಾಲು ಹಿಡಿದು, ಕಣ್ಣೀರು ಸುರಿಸಿ ಬೇಡಿಕೊಂಡರೂ ಅಧಿಕಾರಿಗಳು ಕೇಳಲಿಲ್ಲ. ನಮ್ಮ ರಾಜ್ಯಕ್ಕೆ ವಾಪಸ್ ಹೋಗಲು ಅವಕಾಶ ನೀಡಿ ಅಥವಾ ಅನಾಥಾಶ್ರಮಗಳಿಗಾದರೂ ಈ ಮೀನನ್ನು ಕಳುಹಿಸಿಕೊಡಿ ಎಂದು ಕೇಳಿಕೊಂಡರೂ ಸ್ಪಂದಿಸಲಿಲ್ಲ’ ಎಂದುಅಳಲು ತೋಡಿಕೊಂಡರು.

‘ಕೊನೆಗೆ ಅಲ್ಲಿನ ಅಧಿಕಾರಿಯೊಬ್ಬ, ಕರ್ನಾಟಕದವರು ಕಳ್ಳರು. ನಿಮ್ಮ ಮೀನು ನಮಗೆ ಬೇಡ. ಇಲ್ಲಿನ ಘಟನಾವಳಿಗಳನ್ನು ನಿಮ್ಮ ರಾಜ್ಯಕ್ಕೆ ಹೋಗಿ ತೋರಿಸು ಎಂದು, ತ್ಯಾಜ್ಯ ಮೀನನ್ನು ಸುರಿಯುವುದನ್ನು ವಿಡಿಯೊಮಾಡಿಸಿದರು’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಜಿಲ್ಲಾ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ‌ಮಾಂಗ್ರೆ, ಮೀನುಗಾರ ಮುಖಂಡ ರಾಜೇಶ್ ಮಾಜಾಳಿಕರ್ ಇದ್ದರು.

ರಾಜೀನಾಮೆಗೆ ಆಗ್ರಹ: ‘ಗೋವಾ ರಾಜ್ಯದ ಆರೋಗ್ಯ ಸಚಿವವಿಶ್ವಜಿತ್ ರಾಣೆ, ಅಲ್ಲಿನ ಮುಖ್ಯಮಂತ್ರಿಯ ಸಲಹೆಯನ್ನೂ ಕೇಳದೇ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮೀನಿನಲ್ಲಿ ಫಾರ್ಮಲಿನ್ ಅಂಶವಿದೆಯೆಂದು ಉಭಯ ರಾಜ್ಯಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಸ್ಥಾನಕ್ಕೆರಾಣೆ ಹಾತೊರೆಯುತ್ತಿದ್ದಾರೆ. ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕು.ಅವರನ್ನುರಾಜಕಾರಣದಿಂದಲೇ ದೂರ ಇಡಬೇಕು’ ಎಂದು ಗಣಪತಿ ಮಾಂಗ್ರೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT