ಶುಕ್ರವಾರ, ಮಾರ್ಚ್ 5, 2021
21 °C

ಕಂಟೈನ್‌ಮೆಂಟ್‌ ಪ್ರದೇಶ ಬಿಟ್ಟು ಉಳಿದೆಡೆ ಗಾರ್ಮೆಂಟ್ಸ್‌ಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಸಡಿಲಿಸಿದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಕೆಂಪು ವಲಯದಲ್ಲಿರುವ ನಿರ್ಬಂಧಿತ (ಕಂಟೈನ್‌ಮೆಂಟ್‌‌) ಪ್ರದೇಶ ಬಿಟ್ಟು ಉಳಿದೆಡೆ ಕಡೆಗಳಲ್ಲಿ ಸಿದ್ಧ ಉಡುಪು (ಗಾರ್ಮೆಂಟ್ಸ್‌) ಘಟಕಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

‘ಅಧಿಕೃತವಾಗಿ ಆಮದು ರಫ್ತು ಕೋಡ್‌ (ಐಇಸಿ) ಹೊಂದಿರುವ ಮತ್ತು ಉಡುಪು ರಫ್ತು ಉತ್ತೇಜನ ಮಂಡಳಿಯಲ್ಲಿ (ಎಇಪಿಸಿ) ನೋಂದಣಿಯಾಗಿರುವ ಘಟಕಗಳನ್ನು ಕಾರ್ಯಾರಂಭಿಸಬಹುದು. ಆದರೆ, ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿನ ಮೂರನೇ ಒಂದರಷ್ಟು  ಮಂದಿ ಮಾತ್ರ ಕಾರ್ಯನಿರ್ವಹಿಸಬಹುದು. ನಿರ್ದಿಷ್ಟ ಕಾರ್ಯಾಚರಣೆ ಮಾನದಂಡವನ್ನು (ಎಸ್ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗಾರಿಕೆಗಳ ಆರಂಭಕ್ಕೆ ಈ ಹಿಂದೆಯೇ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿ
ದ್ದರೂ, ಗಾರ್ಮೆಂಟ್ಸ್ ಘಟಕಗಳನ್ನು ಅದರಿಂದ ಹೊರಗಿಡಲಾಗಿತ್ತು. ಬೆಂಗಳೂರು ಒಂದರಲ್ಲೇ 850ಕ್ಕೂ ಹೆಚ್ಚು ಸಿದ್ಧ ಉಡುಪು ಘಟಕಗಳಿದ್ದು, 2.50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು