ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಕಟ್ಟಡ: ರಾಜ್ಯಕ್ಕೆ 2ನೇ ಸ್ಥಾನ

Last Updated 6 ಫೆಬ್ರುವರಿ 2020, 19:05 IST
ಅಕ್ಷರ ಗಾತ್ರ

ಬೆಂಗಳೂರು: ಲೀಡರ್‌ಷಿಪ್ ಇನ್ ಎನರ್ಜಿ ಆ್ಯಂಡ್ ಎನ್ವಿರಾನ್‌ಮೆಂಟ್ ಡಿಸೈನ್‌ನಲ್ಲಿ (ಎಲ್‌ಇಇಡಿ) ಭಾರತದ ಅಗ್ರಮಾನ್ಯ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಅತ್ಯುತ್ತಮ ರಾಜ್ಯವಾಗಿ ಹೊರ ಹೊಮ್ಮಿದೆ.

ಜಿಬಿಸಿಐ ಇಂಡಿಯಾ (ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಶನ್ ಇಂಕ್) ಈ ಪಟ್ಟಿ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ಹಾಗೂ ಹರಿಯಾಣ ಮೂರನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು, ಉತ್ತರ ಪ್ರದೇಶ, ತೆಲಂಗಾಣ, ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನಗಳಿವೆ.

ಅಮೆರಿಕದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಆ್ಯಂಡ್‌ ಜಿಬಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾಮಾನುಜಂ, ‘ಹಸಿರು ಕಟ್ಟಡಗಳ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ’ ಎಂದು ಅವರು ಹೇಳಿದರು.

‘ಎಲ್‌ಇಇಡಿ ಪ್ರಮಾಣೀಕೃತಗೊಂಡ1,400 ಕಟ್ಟಡಗಳು ಭಾರತದಲ್ಲಿವೆ. ಈ ಪೈಕಿ ಶಾಲೆಗಳು, ಆಸ್ಪತ್ರೆಗಳು, ಕಚೇರಿಗಳು ಮತ್ತು ವಸತಿ ಸಮುಚ್ಛಯಗಳಿವೆ. ಈ ಕಟ್ಟಡಗಳು ಜನರಿಗೆ ಆರೋಗ್ಯಕರವಾದ ವಾತಾವರಣ ಕಲ್ಪಿಸುತ್ತವೆ. ಇದರ ಜತೆಗೆ ಇಂಧನ ಮತ್ತು ನೀರನ್ನು ಉಳಿತಾಯ ಮಾಡಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT