ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಬ್ರಾಡ್‌ಬ್ಯಾಂಡ್‌ಗೆ ಜಿಸ್ಯಾಟ್‌–11 ಮುನ್ನುಡಿ

Last Updated 4 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ
ಬೆಂಗಳೂರು: ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ನನಸಾಗಿಸುವ ಜಿಸ್ಯಾಟ್–11 ಉಪಗ್ರಹವನ್ನು ಬುಧವಾರ ಬೆಳಗಿನ ಜಾವ ಉಡಾವಣೆ ಮಾಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈವರೆಗೆ ನಿರ್ಮಿಸಿರುವ ಉಪಗ್ರಹಗಳಲ್ಲಿ ಜಿಸ್ಯಾಟ್–11 ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ್ದು.

*5,854 ಕೆ.ಜಿ.ಉಪಗ್ರಹದ ತೂಕ

* 15 ವರ್ಷ ಕಾರ್ಯಾವಧಿ

* ಭಾರತೀಯ ಕಾಲಮಾನ ಮಧ್ಯರಾತ್ರಿ 2.07ರಿಂದ 3.23ರ ಮಧ್ಯೆ ಉಡಾವಣೆ

* ಫ್ರೆಂಚ್ ಗಯಾನಾದಿಂದ ಉಡಾವಣೆ

* ಇಷ್ಟು ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್‌ ಇಸ್ರೊ ಬಳಿ ಇಲ್ಲವಾದ್ದರಿಂದಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆ್ಯರಿಯಾನ್–5 ರಾಕೆಟ್‌ ಮೂಲಕ ಉಡಾವಣೆ ಮಾಡಲಾಗುತ್ತಿದೆ

ಉಡಾವಣೆ

* ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಯಲ್ಲಿ ಉಪಗ್ರಹವನ್ನು ಬಿಡುಗಡೆ ಮಾಡಲಿರುವ ರಾಕೆಟ್

* ರಾಕೆಟ್‌ನಲ್ಲಿರುವ ಎಂಜಿನ್‌ ಚಾಲನೆ. ಮತ್ತು ಈ ಕಕ್ಷೆಯಿಂದ ಭೂಸ್ಥಿರ ಕಕ್ಷೆಗೆ ವರ್ಗಾವಣೆ

* ಎರಡನೇ ಬಾರಿ ಎಂಜಿನ್ ಚಾಲನೆ. ಅದೇ ಕಕ್ಷೆಯಲ್ಲಿ ಮತ್ತಷ್ಟು ಎತ್ತರಕ್ಕೆ ವರ್ಗಾವಣೆ

* ಮೂರನೇ ಬಾರಿ ಎಂಜಿನ್ ಚಾಲನೆ. ಅಂತಿಮ ಕಕ್ಷೆಗೆ ಉಪಗ್ರಹ ವರ್ಗಾವಣೆ

ಉಪಯೋಗಗಳು

* ಡಿಶ್‌ ಆ್ಯಂಟೆನಾ ಮೂಲಕ ಮನೆಗಳಿಗೆ ಉಪಗ್ರಹ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆಯಬಹುದು

* ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಪಡೆಯಬಹುದು

* ದೇಶದ ಯಾವುದೇ ಮೂಲೆಯಲ್ಲೂ ವೇಗದ ಬ್ರಾಡ್‌ಬ್ಯಾಂಡ್‌ ಸಂಪರ್ಕ ಲಭ್ಯ

* ಭಾರತ್ ನೆಟ್‌ ಯೋಜನೆ ಅಡಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ

16 ಜಿಬಿಪಿಎಸ್ ವೇಗ

ಈ ಉಪಗ್ರಹವು ಕೇಂದ್ರೀಕೃತ ಕಿರಣಗಳನ್ನು ಬಳಸುವುದರಿಂದ ದತ್ತಾಂಶ ವಿನಿಮಯದ ವೇಗ ಹೆಚ್ಚು. ಈ ಉಪಗ್ರಹವು ಕಾರ್ಯಾರಂಭ ಮಾಡಿ, ಸಾವರ್ಜನಿಕ ಸೇವೆಗೆ ಲಭ್ಯವಾದರೆ 16 ಜಿಬಿಪಿಎಸ್‌ನಷ್ಟು ವೇಗದ ಅಂತರ್ಜಾಲ ಸೇವೆಯನ್ನು ಆರಂಭಿಸಬಹುದು

ಜಿಸ್ಯಾಟ್‌–11 ಉಪಗ್ರಹವು ಇಡೀ ದೇಶಕ್ಕೆ ಸಂಪರ್ಕ ಏರ್ಪಡಿಸಲು ಹಲವು ಇನ್ಫ್ರಾರೆಡ್‌ ಕಿರಣಗಳನ್ನು ಬಳಸುತ್ತದೆ. ಈ ಕಿರಣಗಳ ವ್ಯಾಪ್ತಿ ತೀರಾ ಕಡಿಮೆ. ಆದರೆ ಸಾಮರ್ಥ್ಯ ಅತ್ಯಧಿಕ. ಹೀಗಾಗಿ ದತ್ತಾಂಶ ರವಾನೆಗೆ ಪ್ರಚಂಡ ವೇಗವಿರುತ್ತದೆ. ಇಂತಹ 32 ಕಿರಣಗಳು ದೇಶದ 16 ಸ್ಥಳಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ಹೀಗಾಗಿ ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ವೇಗದ ಅಂತರ್ಜಾಲ ಸೇವೆ ಲಭ್ಯವಾಗಲಿದೆ

* ಈ ಹಿಂದಿನ ಸಂಪರ್ಕ ಉಪಗ್ರಹಗಳಲ್ಲಿ ವಿಸ್ತೃತ–ಏಕ ಇನ್ಫ್ರಾರೆಡ್‌ ಕಿರಣ ಬಳಸಲಾಗುತ್ತಿತ್ತು. ಇಡೀ ದೇಶಕ್ಕೆ ಒಂದೇ ಕಿರಣದ ಮೂಲಕ ಸಂಪರ್ಕ ಏರ್ಪಡುತ್ತಿದ್ದುದ್ದರಿಂದ, ಕಿರಣದ ಸಾಮರ್ಥ್ಯ ದುರ್ಬಲವಾಗುತ್ತಿತ್ತು. ಹೀಗಾಗಿ ವೇಗ ಕಡಿಮೆ ಇರುತ್ತಿತ್ತು

* ಆ ಕಕ್ಷೆಯಿಂದ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ವರ್ಗಾಯಿಸಲಾಗುತ್ತದೆ. ಉಪಗ್ರಹದಲ್ಲಿರುವ ಎಂಜಿನ್‌ನ ಶಕ್ತಿಯಿಂದ ಈ ಕ್ರಿಯೆ ನಡೆಸಲಾಗುತ್ತದೆ

* ಒಟ್ಟು ಮೂರುಹಂತದಲ್ಲಿ ಈ ವರ್ಗಾವಣೆ ನಡೆಯುತ್ತದೆ. ನಂತರ ಅಂತಿಮ ಕಕ್ಷೆಯಲ್ಲಿ ಜಿಸ್ಯಾಟ್–11 ನೆಲೆ ನಿಲ್ಲಲಿದೆ

ಆಧಾರ: ಇಸ್ರೊ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT