ಗುರುವಾರ , ಏಪ್ರಿಲ್ 2, 2020
19 °C
ಜಿಎಸ್‌ಟಿ ವಂಚಿಸಿದ ಆರೋಪ

ತೆರಿಗೆ ವಂಚನೆ: ಬುಕ್ಕಿಗಳ ಮನೆ, ಕಚೇರಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಕು ಮತ್ತು ಸೇವಾತೆರಿಗೆ(ಜಿಎಸ್‌ಟಿ) ವಂಚಿಸಿದ ಆರೋಪಕ್ಕೆ ಒಳಗಾಗಿರುವ ಟರ್ಫ್‌ ಕ್ಲಬ್‌ ಬುಕ್ಕಿಗಳ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡಿದ್ದ 20 ತಂಡಗಳು ಬಿಟಿಸಿಯ 20 ಬುಕ್ಕಿಗಳ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತು. ದಾಖಲೆ ಪತ್ರಗಳ ಪರಿಶೀಲನೆ ಕಾರ್ಯ ಸಂಜೆ ಬಳಿಕವೂ ಮುಂದುವರಿದಿತ್ತು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಿತೀಶ್‌ ಪಾಟೀಲ್‌ ತಿಳಿಸಿದರು.

ಜಿಎಸ್‌ಟಿ ಸರಿಯಾಗಿ ಪಾವತಿ ಮಾಡದ ಕುರಿತು ದೂರುಗಳ ಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಬುಕ್ಕಿಗಳು ಜಿಎಸ್‌ಟಿ ಇನ್‌ವಾಯ್ಸ್‌ ಕೊಡುತ್ತಿರಲಿಲ್ಲ. ಲೆಕ್ಕಪತ್ರಗಳನ್ನು ಸಲ್ಲಿಸುತ್ತಿರಲಿಲ್ಲ ಎಂದರು.

ತೆರಿಗೆ ವಂಚನೆ ದೂರುಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬುಕ್ಕಿಗಳಿಗೆ ಸಮನ್ಸ್‌ ನೀಡಲಾಗಿತ್ತು. ಕೆಲವರು ಮಾತ್ರ ವಿಚಾರಣೆಗೆ ಹಾಜರಾಗಿದ್ದರು. ಉಳಿದವರು ಸಬೂಬುಗಳನ್ನು ಹೇಳಿ ವಿಚಾರಣೆ ತಪ್ಪಿಸಿಕೊಂಡಿದ್ದರು ಎಂದೂ ಅವರು ಮಾಹಿತಿ ನೀಡಿದರು.

ದಾಖಲೆ ಪತ್ರಗಳ ಪರಿಶೀಲನೆ ಮುಗಿದ ಬಳಿಕವಷ್ಟೆ ಜಿಎಸ್‌ಟಿ ವಂಚನೆ ಪ್ರಮಾಣ ಕುರಿತು ನಿಖರವಾಗಿ ಹೇಳಲು ಸಾಧ್ಯ ಎಂದು ಪಾಟೀಲ್‌ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು