ಗುರುವಾರ , ಏಪ್ರಿಲ್ 9, 2020
19 °C

ಜನತಾ ಕರ್ಫ್ಯೂ: ಪ್ರಧಾನಿ ಮೋದಿಗೆ ದೇವೇಗೌಡರ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ ಕೊರೊನಾ ವೈರಸ್‌ ಅನ್ನು ಎದುರಿಸಬೇಕು ಎಂಬ ಪ್ರಧಾನಿಯವರ ಮಾತು‌ ಪಾಲನೆಗೆ ಯೋಗ್ಯವಾಗಿದ್ದು, ಮಾರ್ಚ್ 22 ಭಾನುವಾರದಂದು ಪ್ರಧಾನಿ ಕರೆ ನೀಡಿರುವ 'ಜನತಾ ಕರ್ಫ್ಯೂ'ವನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಕರ್ತವ್ಯವನ್ನು ಪಾಲಿಸೋಣ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ 'ಜನತಾ ಕರ್ಫ್ಯೂ'ವನ್ನು ಬೆಂಬಲಿಸೋಣ ಎಂದು ಅವರು ಶುಕ್ರವಾರ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಕೂಡ ಮಾಡಿದ್ದಾರೆ.

ದೇಶದ ಪ್ರಧಾನಿಗಳು ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ಅವರು ಕೊಟ್ಟ ಕರೆ ಸಮಯೋಚಿತವೂ ಮತ್ತು ಆಚರಣೆಯೋಗ್ಯವು ಆಗಿದೆ. ಕೊರೊನಾ ಮಹಾಮಾರಿಗೆ ಮಂತ್ರ ಮತ್ತು ಮದ್ದು ಇಲ್ಲದಿರುವಾಗ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ ಎದುರಿಸಬೇಕು ಎಂಬ ಪ್ರಧಾನಿ ಅವರ ಕರೆ ಪಾಲನೆಯೋಗ್ಯವಾಗಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.

65 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರಬರಬಾರದು ಎಂಬ ಪ್ರಧಾನಿಯವರ ಆಗ್ರಹಪೂರ್ವಕ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಗಾಗಿ ನಾವು ಮಾರ್ಚ್ 22ರಂದು  ಜನತಾ ಕರ್ಫ್ಯೂವನ್ನು ಪಾಲಿಸೋಣ ಹಾಗೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಪ್ಯಾರಾಮೆಡಿಕಲ್‌ ಸಿಬ್ಬಂದಿಗಳಿಗೂ ಗೌರವ ಸಲ್ಲಿಸೋಣ ಎಂದು ದೇವೇಗೌಡರು ತಿಳಿಸಿದ್ದಾರೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು