ರಾಯಚೂರು: ಮಳೆಯಾದರೂ ಗ್ರಾಮವಾಸ್ತವ್ಯಕ್ಕೆ ಧಕ್ಕೆಯಿಲ್ಲ

ಶನಿವಾರ, ಜೂಲೈ 20, 2019
26 °C

ರಾಯಚೂರು: ಮಳೆಯಾದರೂ ಗ್ರಾಮವಾಸ್ತವ್ಯಕ್ಕೆ ಧಕ್ಕೆಯಿಲ್ಲ

Published:
Updated:

ರಾಯಚೂರು: ಜಿಲ್ಲೆಯಲ್ಲಿ ಜೂನ್‌ 26 ರಂದು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನಚ್ಚರಿಕೆ ಕ್ರಮ ವಹಿಸಿರುವ ಜಿಲ್ಲಾಡತವು, ಮುಖ್ಯಮಂತ್ರಿ ಗ್ರಾಮವಾಸ್ಯವ್ಯಕ್ಕೆ ಧಕ್ಕೆಯಾಗದಂತೆ ಕರೇಗುಡ್ಡದ ನಿರ್ಮಿಸಿರುವ ವೇದಿಕೆಗೆ ತಗಡಿನ ಹೊದಿಕೆ ಹಾಕಲಾಗಿದೆ.

ಗ್ರಾಮಕ್ಕೆ ತಲುಪುವ ಮೊದಲೇ ಗ್ರಾಮಕ್ಕೆ ಹೊಂದಿಕೊಂಡು ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 20 ಎಕರೆ ಜಮೀನನ್ನು ಸಜ್ಜುಗೊಳಿಸಲಾಗಿದೆ. ಮುಳ್ಳಿನ ಗಿಡಗಳಿಂದ ಕೂಡಿದ್ದ ಈ ಜಾಗವನ್ನು ಒಂದು ವಾರದಲ್ಲಿ ಸ್ವಚ್ಛಗೊಳಿಸಿ, ಕಾರ್ಯಕ್ರಮ ಆಯೋಜಿಸಲು ಅಣಿ ಮಾಡಲಾಗಿದೆ. 

ಇದೇ ಸ್ಥಳದಲ್ಲಿ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮತ್ತು ಸುಮಾರು 15 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. 

ಗ್ರಾಮಕ್ಕೆ ತಲುಪುವುದು ಹೇಗೆ?
ರಾಯಚೂರಿನಿಂದ ಕರೇಗುಡ್ಡ 65 ಕಿಲೋ ಮೀಟರ್‌. ರಾಯಚೂರಿನಿಂದ ಮಾನ್ವಿಗೆ 50 ಕಿಲೋ ಮೀಟರ್‌, ಮಾನ್ವಿಯಿಂದ ಸಿಂಧನೂರು ಮಾರ್ಗದಲ್ಲಿ 10 ಕಿಲೋ ಮೀಟರ್‌ ದೂರದ ಕೊಟ್ನೆಕಲ್‌ ಗ್ರಾಮಕ್ಕೆ ಹೋಗಿ, ಬಲಭಾಗದಲ್ಲಿ ಕರೇಗುಡ್ಡಕ್ಕೆ ಐದು ಕಿಲೋ ಮೀಟರ್‌ ಸಂಚರಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !